ಡಾ. ಸುಧಾಕರ್ ಅವರಿಗೆ ವಿದೇಶದಲ್ಲಿ ಕೊರೋನಾ ಸೋಂಕು ತಗುಲಿರುವ ಸಾಧ್ಯತೆಗಳಿದೆ. ವಿದೇಶ ಪ್ರವಾಸದಿಂದ ಬಂದ ಬೆನ್ನಲ್ಲೇ ಅವರಿಗೆ ಸೋಂಕು ದೃಢಪಟ್ಟಿದೆ.
ಬೆಂಗಳೂರು : ವಿಶ್ವವನ್ನು ಕಂಗಾಲು ಮಾಡಿದ್ದ ಕೊರೋನಾ ಸೋಂಕಿನ ಮೂರು ಅಲೆಗಳಲ್ಲೂ ಕೊರೋನಾ ಸೋಂಕಿನಿಂದ ಪಾರಾಗಿದ್ದ ಪಾರಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅವರು ನಾಲ್ಕನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಡಾ. ಸುಧಾಕರ್ ಅವರಿಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಅವರೇ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಮೂರು ಅಲೆಗಳ ಸಂದರ್ಭದಲ್ಲೂ ಕೋವಿಡ್ ಸೋಂಕಿನಿಂದ ಪಾರಾಗಿದ್ದ ನಾನು ಈಗ ಸೋಂಕಿಗೆ ತುತ್ತಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಲಾರಂಭಿಸಿದ್ದು, ಮುಂಬೈನಲ್ಲಿ ಲಾಕ್ಡೌನ್ ಸಾಧ್ಯತೆಗಳು ಹೆಚ್ಚಿದೆ.
ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಈ ಬಗ್ಗೆ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಗುರುವಾರ ಮಾಹಿತಿ ನೀಡಿದ್ದರು.
Discussion about this post