ಮಾವಿನ ಹಣ್ಣಿನ ಸೀಸನ್ ಮುಗಿಯಿತು ಇನ್ನೇಲ್ಲಿ ಮಾವು ಸವಿಯೋಣ, ಪೇರಳೆ ಹಣ್ಣು ತಿನ್ನಬೇಕು ಸಿಗೋದಿಲ್ಲ.. ಹೀಗೆ ವಿವಿಧ ಹಣ್ಣುಗಳನ್ನು ಸವಿಯಬೇಕು ಅಂದ್ರೆ ಸೀಸನ್ ಅಡ್ಡಿ ಬರುತ್ತದೆ. ತಿನ್ನಲೇಬೇಕು ಎಂದು ಹೋದರೆ ಮಾರುಕಟ್ಟೆಗೆ ಹೋದರೆ ಸಿಗುವುದಿಲ್ಲ ಪ್ಲೇವರ್ ಗಳು. ಅಂದ್ರೆ essence…
ಹೀಗಾಗಿ ಗ್ರಾಹಕರ
ಬೇಡಿಕೆಯನ್ನು ಮನಗಂಡಿರುವ ‘ಡುಮಾಂಟ್’ ಹಣ್ಣುಗಳ ರಿಯಲ್ ಟೇಸ್ಟ್ ಅನ್ನು ಗ್ರಾಹಕರಿಗೆ ಉಣ ಬಡಿಸಲು ಸಿದ್ದವಾಗಿದೆ. ಎಲ್ಲಾ ಕಾಲದಲ್ಲೂ ಎಲ್ಲರಿಗೂ ಎಲ್ಲಾ ಹಣ್ಣುಗಳ ರಿಯಲ್ ಟೇಸ್ಟ್ ಅನ್ನು
ಉಣ ಬಡಿಸುವುದೇ ಕಂಪನಿಯ ಉದ್ದೇಶವಾಗಿದೆ.
ಹೀಗಾಗಿಯೇ ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಗ್ರಾಹಕರ ಮನ ತಣಿಸಿರುವ ಸಂಸ್ಥೆ, ಬೆಂಗಳೂರಿನಲ್ಲಿ ರಿಯಲ್ ಫ್ರೂಟ್ ಗಳ ಟೇಸ್ಟ್ ಅನ್ನು ಉಣ ಬಡಿಸಲು ನಿರ್ಧರಿಸಿದೆ.
ಈ ವರೆಗೂ ಮಾರ್ಕೆಟ್ನಲ್ಲಿ
ವಿವಿಧ ಬಗೆಯ ಮಿಲ್ಕ್ ಶೇಕ್ಸ್, ಡ್ರಿಂಕ್ಸ್ & ಐಸ್ಕ್ರೀಮ್ಗಳು
ಬಂದಿವೆ. ಅದ್ಭುತವಾದ ರುಚಿ ಹಾಗೂ ಸ್ವಚ್ಛವಾದ ಹಾಲಿನ ಪ್ಲೇವರ್ ಹೊಂದಿರುವ ಐಟಂಗಳ ಇಲ್ಲ
ಅನ್ನುವುದು ಗ್ರಾಹಕರ ಕೊರಗು. ಹೀಗಾಗಿ ಆ ಸ್ಥಾನವನ್ನು ತುಂಬಲು ಹೊಚ್ಚಹೊಸ ರುಚಿಯೊಂದಿಗೆ ಐಸ್ಕ್ರೀಮ್
ಮತ್ತು ಮಿಲ್ಕ್ ಶೇಕ್ಗಳೊಂದಿಗೆ ‘ಡುಮಾಂಟ್’ ಮಾರುಕಟ್ಟೆಗೆ ಬಂದಿದೆ.
ಮಾವಿನ ಸ್ವಾದ, ಪೈನಾಪಲ್ ಸವಿ, ಪೇರಳೆ ರುಚಿ ಹೀಗೆ ಯಾವ ಹಣ್ಣಿನ ಐಸ್ ಕ್ರೀಮ್ ಬೇಕು ಹೇಳಿ, ನಾವು ತಿನ್ನುತ್ತಿರುವುದು ಐಸ್ ಕ್ರೀಮ್ ಅಥವಾ ಹಣ್ಣು ಅನ್ನುವ ಗೊಂದಲ ಮೂಡಿಸುವ ರೀತಿಯ ಉತ್ಪನ್ನಗಳನ್ನು ಸಂಸ್ಥೆ ಗ್ರಾಹಕರಿಗೆ ಪರಿಚಯಿಸಿದೆ.
ಹಣ್ಣಿನ ಕೃತಕ
ಪ್ಲೇವರ್ ( essence ) ಐಸ್ ಕ್ರೀಮ್
ತಿಂದ್ರೆ ಹಣ್ಣು ತಿಂದ ಅನುಭವ ಆಗೋದಿಲ್ಲ. ಇಷ್ಟಪಟ್ಟ ಪ್ಲೇವರ್ ಸಿಗಲೇ ಇಲ್ಲ ಅನ್ನುವ ಕೊರಗು
ಕಾಡುತ್ತದೆ. ಆದರೆ ‘ಡುಮಾಂಟ್’ ತಿಂದ ಮೇಲೆ ನೀವೇ ಹೇಳಬೇಕು.
ಇದಕ್ಕಾಗಿ ರೈತರಿಂದ ನೇರವಾಗಿ ಖರೀದಿಸಿ ಶೇಖರಿಸಿದ ಹಣ್ಣು, ಹಾಲಿನಿಂದ ಐಸ್ಕ್ರೀಮ್, ಮಿಲ್ಕ್ ಶೇಕ್ ತಯಾರಿಸಲಾಗುತ್ತದೆ.
ಪ್ರಸ್ತುತ ಬೆಂಗಳೂರಿನ
ಕೋಡಿಹಳ್ಳಿಯ ಸ್ಟರ್ಲಿಂಗ್ ಮ್ಯಾಕ್ ಹೋಟೆಲ್ನಲ್ಲಿ ಡುಮಾಂಟ್ ಐಸ್ಕ್ರೀಮ್ ಅಂಡ್ ಮಿಲ್ಕ್ ಶೇಕ್
ಪ್ರೀ ಲಾಂಚ್ ಕಾರ್ಯಕ್ರಮ ನಡೆಯಿತು. ಮ್ಯೂಜಿಕ್ ವಿತ್ ಮಿಲ್ಕ್ ಶೇಕ್ ಹೆಸರಿನಲ್ಲಿ ನಡೆದ ವಿನೂತನ
ಕಾರ್ಯಕ್ರಮ ನಗರದ ಜನತೆಯನ್ನ ಆಕಷಿಸಿತು.
ಇನ್ನು ಡುಮಾಂಟ್ ಐಸ್ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಎಂಡಿ ಸುನೀಲ್ ದಕ್ಷಿಣ ಭಾರತದಲ್ಲಿ ಎಲ್ಲೂ ಸಿಗದ ಸುಮಾರು 15 ಬಗೆಯ ಪ್ಲೇವರ್ಗಳನ್ನು ಡುಮಾಂಟ್ ಪರಿಚಯಿಸುತ್ತಿದೆ.
ಒಂದ್ಕಡೆ ಐಸ್ ಕ್ರೀಮ್, ಮತ್ತೊಂದ್ಕಡೆ ಮಿಲ್ಕ್ ಶೇಕ್ ಸಹ ತಯಾರಿಸುತ್ತಿರೋ ಸಂಸ್ಥೆಗಳು ಗುಣಮಟ್ಟ ಕಾಯ್ದುಕೊಳ್ತಿರೋ ಬೆರಳೆಣಿಕೆಯಷ್ಟು ಸಂಸ್ಥೆಗಳಲ್ಲಿ ಡುಮಾಂಟ್ ಸಹ ಒಂದು. ರುಚಿ, ಶುಚಿ, ಕ್ವಾಲಿಟಿ, ಕ್ವಾಂಟಿಟಿ ವಿಷಯದಲ್ಲಿ ಎಳಷ್ಟೂ ರಾಜಿಯಾಗದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಡುಮಾಂಟ್. ಬೆಂಗಳೂರು, ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಇದೇ ತಿಂಗಳ 19 ರಿಂದ ಸ್ಟೋರ್ಗಳು ಗ್ರಾಹಕರ ಸೇವೆಗೆ ಲಭ್ಯವಿರಲಿವೆ ಎಂದು ತಿಳಿಸಿದರು.
ಪ್ರಸ್ತುತ ಜಯನಗರ, ಹೆಚ್.ಎಸ್.ಆರ್.ಲೇ ಜೌಟ್ ಮತ್ತು ಚರ್ಚ್ ಸ್ಟ್ರೀಟ್ ಗಳಲ್ಲಿ ಈ ಉತ್ಪನ್ನಗಳು ಸಿಗಲಿದೆ.
Discussion about this post