ಬೆಂಗಳೂರು : ಟಗರು ಸರೋಜಾ, ಅದೊಂದು ಪಾತ್ರ ಬಂದು ಹೋಗಿ ಕೆಲ ವರ್ಷಗಳೇ ಕಳೆದಿದೆ. ಆದರೆ ಜನರ ಮನಸ್ಸಿನಲ್ಲಿ ಮಾತ್ರ ತ್ರಿವೇಣಿ ರಾವ್ ಇನ್ನೂ ಕಾನ್ಸ್ ಟೇಬಲ್ ಸರೋಜಾ ಆಗಿಯೇ ಉಳಿದಿದ್ದಾರೆ.
ಟಗರು ಸಿನಿಮಾ ಸದ್ದು ಮಾಡಿದ್ದ ಸಂದರ್ಭದಲ್ಲಿ ಕಾನ್ಸ್ಟೇಬಲ್ ಸರೋಜ ಹೆಸರಿನಲ್ಲಿ ಹುಟ್ಟಿದ ಅಭಿಮಾನಿ ಬಳಗಕ್ಕೆ ಲೆಕ್ಕವಿಲ್ಲ. ಆದರೆ ಅದರಲ್ಲಿ ಎಷ್ಟು ಬಳಗ ಜೀವಂತವಿದೆಯೋ ಗೊತ್ತಿಲ್ಲ.
ಆದರೂ ಜನ ಮಾತ್ರ ಇನ್ನೂ ಸರೋಜಾ ಪಾತ್ರವನ್ನು ಮರೆತಿಲ್ಲ ಅನ್ನುವುದಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಎಸ್. ನಾಗೇನಹಳ್ಳಿ ಹುಡುಗರೇ ಸಾಕ್ಷಿ.
ಇತ್ತೀಚೆಗೆ ಊರಿನಲ್ಲಿ ಕ್ರಿಕೆಟ್ ಮ್ಯಾಚ್ ಒಂದನ್ನು ಆಯೋಜಿಸಲಾಗಿತ್ತು. ಸಾಕಷ್ಟು ತಂಡಗಳು ಮೈದಾನಕ್ಕೆ ಇಳಿದಿತ್ತು. ಅದರಲ್ಲಿ ಗಮನ ಸೆಳೆದದ್ದು ಮಾತ್ರ ಟಗರು ಸರೋಜಾ ಹೆಸರಿನ ತಂಡ.
ಒಂದಿಷ್ಟು ಹುಡುಗರು ಸೇರಿ ಕಟ್ಟಿದ ಕ್ರಿಕೆಟ್ ತಂಡಕ್ಕೆ ಟಗರು ಸರೋಜಾ ಹೆಸರಿಟ್ಟುಕೊಂಡಿದ್ದಾರೆ. ಟೀಮ್ ಹೆಸರು ಡಿಫರೆಂಟ್ ಆಗಿ ಇರ್ಲಿ ಅಂತಾ ಇಟ್ಟುಕೊಂಡಿದ್ದಾರೋ, ಸರೋಜಾ ಮೇಲಿನ ಅಭಿಮಾನದಿಂದ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ.
ಕ್ರಿಕೆಟ್ ಮೈದಾನಕ್ಕೆ ಇಳಿಯುವಾಗ ಈ ಟೀಮ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಮಾತ್ರ ಸತ್ಯ.
ಆದರೆ ಟೂರ್ನಮೆಂಟ್ ನಲ್ಲಿ 3 ಪಂದ್ಯಗಳಲ್ಲಿ ಗೆದ್ದು ಬೀಗಿದ ಟಗರು ಸರೋಜ ಟೀಮ್, 4ನೇ ಪಂದ್ಯದಲ್ಲಿ ಸೋಲಿಗೆ ಶರಣಾಯ್ತು.
ಏನೇ ಇರ್ಲಿ, ಘಟಾನುಘಟಿ ನಾಯಕರೇ ನಟಿಸಿದ ಪಾತ್ರಗಳನ್ನು ಜನ ಮರೆತಿರುವಾಗ ಸರೋಜಾ ಅನ್ನುವ ಪಾತ್ರವನ್ನು ಜನ ಮರೆತಿಲ್ಲ ಅನ್ನುವುದೇ ಖುಷಿ.
Discussion about this post