ರಸ್ತೆ ಯೋಜನೆಯೊಂದಕ್ಕೆ ಪೂಜೆಗೆಂದು ಅರ್ಚಕರನ್ನು ಕರೆಸಿರುವ ಅಧಿಕಾರಿಗಳ ಕ್ರಮದ ವಿರುದ್ಧ ಡಿಎಂಕೆ ಸಂಸದ ಎಸ್ ಸೆಂಥಿಲ್ ಕುಮಾರ್ ಕಿಡಿ ಕಾರಿದ್ದಾರೆ ( DMK MP Senthilkumar )
ಚೆನೈ : ಹಿಂದೂ ಅರ್ಚಕರ ಮೂಲಕ ರಸ್ತೆ ಯೋಜನೆಗೆ ಭೂಮಿ ಪೂಜೆ ನಡೆಸಲು ಅಧಿಕಾರಿ ಮುಂದಾಗಿರುವುದರ ವಿರುದ್ಧ ಆಡಳಿತಾರೂಢ ಡಿಎಂಕೆಯ ಲೋಕಸಭಾ ಸದಸ್ಯ ಸೆಂಥಿಲ್ ಕುಮಾರ್ ಗರಂ ( DMK MP Senthilkumar ) ಆಗಿರುವ ಘಟನೆ ನಡೆದಿದೆ.
ತಮ್ಮ ಧರ್ಮಪುರಿ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಶಂಕು ಸ್ಥಾಪನೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ಹಿಂದೂ ಅರ್ಚಕರನ್ನು ಕಂಡ ತಕ್ಷಣ ಕೆಂಡಾಮಂಡಲರಾದ ಸಂಸದರು, ಒಂದು ನಿರ್ದಿಷ್ಟ ಧರ್ಮದ ಪ್ರಾರ್ಥನೆಯೊಂದಿಗೆ ಸರ್ಕಾರಿ ಕಾರ್ಯಕ್ರಮ ಆಯೋಜಿಸಬಾರದು ಎಂದು ನಿಮಗೆ ಗೊತ್ತಿಲ್ಲವೇ. ಸರ್ಕಾರಿ ಕಾರ್ಯಕ್ರಮ ಹೇಗೆ ನಡೆಸಬೇಕು ಎಂದು ಗೊತ್ತಿಲ್ವ ಅಂದರು.
ಇದನ್ನೂ ಓದಿ : raichur police : ಪೊಲೀಸರಿಂದ ವಾಹನಕ್ಕೆ ವಿಮೆ ಸೌಲಭ್ಯ : ಜನ ಮೆಚ್ಚುಗೆ ಪಡೆದ ರಾಯಚೂರು ಪೊಲೀಸರ ಸೌಲಭ್ಯ
ಬೇರೆ ಧರ್ಮದ ಗುರುಗಳು ಎಲ್ಲಿದ್ದಾರೆ, ಕ್ರಿಶ್ಚಿಯನ್, ಮುಸ್ಲಿಂ ಧರ್ಮಗುರುಗಳು ಎಲ್ಲಿ, ಚರ್ಚ್ ಫಾದರ್, ಇಮಾಮ್ ಅವರನ್ನು ಕರೆಯಿಸಿ, ನಾವು ನಾಸ್ತಿಕರು, ದ್ರಾವಿಡ ಕಳಂಗ ಪ್ರತಿನಿಧಿಗಳು ಎಂದು ಗುಡುಗಿದರು. ಇದು ದ್ರಾವಿಡ ಮಾದರಿಯ ಆಡಳಿತ, ಸರ್ಕಾರ ಎಲ್ಲಾ ಧರ್ಮಕ್ಕೆ ಸೇರಿದ ಜನರಿಗಾಗಿ ಇದೆ ಅಂದರು. ಇದೇ ವೇಳೆ ಹಿಂದೂ ಅರ್ಚಕರನ್ನು ಉದ್ದೇಶಿಸಿ ಎಲ್ಲಾ ತೆಗೆಯಿರಿ ಸಾರ್, ಕ್ಲಿಯರ್ ಮಾಡಿ ಸರ್ ಎಂದು ಪೂಜೆಗೆ ಮಾಡಿದ ಸಿದ್ಧತೆಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.
ಸಂಸದರ ಅಬ್ಬರಕ್ಕೆ ಬೆದರಿದ ಲೋಕೋಪಯೋಗಿ ಅಧಿಕಾರಿಗಳು ಸಂಸದರ ಕ್ಷಮೆಯಾಚಿಸಿದರು. ಇದೇ ವೇಳೆ ಸ್ಪಷ್ಟನೆ ಕೊಟ್ಟ ಸಂಸದರು ನಾನು ಪೂಜೆಯ ವಿರೋಧಿಲ್ಲ, ಆದರೆ ಅದು ಎಲ್ಲರನ್ನೂ ಒಳಗೊಂಡಿರಬೇಕು ಅಂದರು.
ಆದರೆ ಈಗ ಡಿಎಂಕೆಯ ಲೋಕಸಭಾ ಸದಸ್ಯ ಸೆಂಥಿಲ್ ಕುಮಾರ್ ವರ್ತನೆ ವೈರಲ್ ಆಗಿದ್ದು, ಸಂಸದರ ನಡೆಯನ್ನು ಬಹುತೇಕರು ಖಂಡಿಸಿದ್ದಾರೆ. ಜೊತೆಗೆ ಸೆಂಥಿಲ್ ಕುಮಾರ್ ಹಿಂದೂ ಸಂಪ್ರದಾಯದ ಪ್ರಕಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.
jagdeep dhankhar vice president : ಉಪರಾಷ್ಟ್ರಪತಿ ಚುನಾವಣೆ : NDA ಅಭ್ಯರ್ಥಿಯಾಗಿ ಜಗದೀಪ್ ಧನ್ಖರ್
ಜನತೆಯ ರಾಜ್ಯಪಾಲ ಎಂದೇ ಗುರುತಿಸಿಕೊಂಡಿರುವ ಜಗದೀಪ್ ಧನ್ಖರ್ ( jagdeep dhankhar vice president ) ಇದೀಗ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಲಿದ್ದಾರೆ
ನವದೆಹಲಿ : ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ NDA ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಪ್ ಧನ್ಖರ್ ( jagdeep dhankhar vice president ) ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದೆ. ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. ಇಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜಗದೀಪ್ ಧನ್ಖರ್ ಹೆಸರನ್ನು ಪ್ರಕಟಿಸಿದ್ದಾರೆ.
ಯಾರು ಜಗದೀಪ್ ಧನ್ಖರ್..?
1989ರಲ್ಲಿ ಜುಂಜುನು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಚೊಚ್ಚಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದರು. ಆಗ ಅವರು ಜನತಾದಳ ಪಕ್ಷದಲ್ಲಿದ್ದರು. ಬಳಿಕ 1990ರಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1993ರಲ್ಲಿ ಅಜ್ಮೀರ್ ನ ಕಿಶನ್ ಗಢ್ ಕ್ಷೇತ್ರದಿಂದ ಸ್ಪರ್ಧಿಸಿ ರಾಜಸ್ಥಾನ ವಿಧಾನಸಭೆ ಪ್ರವೇಶಿಸಿದ್ದರು.ಈ ನಡುವೆ ಸುಪ್ರೀಂಕೋರ್ಟ್ ನ ಹಿರಿಯ ವಕೀಲರಾಗಿ ಗುರುತಿಸಿಕೊಂಡಿದ್ದ ಧನ್ಖರ್ 2003ರಲ್ಲಿ ಬಿಜೆಪಿ ಸೇರಿದ್ದರು.
ಜುಲೈ 2019ರಲ್ಲಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಅಲ್ಲಿ ಮಮತಾ ಬ್ಯಾನರ್ಜಿಯ ಅಬ್ಬರಕ್ಕೆ ಬ್ರೇಕ್ ಹಾಕುವಲ್ಲಿ ರಾಜ್ಯಪಾಲರು ಯಶಸ್ವಿಯಾಗಿದ್ದರು. ಮಾತ್ರವಲ್ಲದೆ ಪೀಪಲ್ಸ್ ಗವರ್ನರ್ ಆಗಿಯೂ ಗುರುತಿಸಿಕೊಂಡಿದ್ದರು.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ರಂದು ಅಂತ್ಯಗೊಳ್ಳಲಿದೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ. ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮತದಾನ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಹೊರಬರಲಿದೆ.ಈಗಾಗಲೇ ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರು ಸ್ಪರ್ಧಿಸಿದ್ದರೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣಕ್ಕಿಳಿದಿದ್ದಾರೆ.
Discussion about this post