ಬಿಜೆಪಿ ನಾಯಕರು ರಾಹುಲ್ ಗಾಂಧಿ ತಟ್ಟೆ ಇಣುಕುವುದನ್ನು ಬಿಟ್ಟು ದೇಶದ ಬೇರೆ ಸಮಸ್ಯೆಗಳತ್ತ ಚಿತ್ತ ಹರಿಸುವುದು ಬೆಟರ್.
ಇಲ್ಲವಾದರೆ ರಾಹುಲ್ ಗಾಂಧಿ ಏನು ತಿನ್ನಬೇಕು ಬೇಡ ಅನ್ನುವುದನ್ನು ಹೇಳಿ ಬಿಡಲಿ. ಅದು ಅಸಾಧ್ಯವಾದರೆ ರಾಹುಲ್ ಗಾಂಧಿಯೇ ಬಿಜೆಪಿ ನಾಯಕರ ಅನುಮತಿ ಪಡೆದು ತಿನ್ನುವುದು ಒಳಿತು.
ಯಾಕೆ ಈ ಮಾತು ಅಂದರೆ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಕಾಠ್ಮಂಡುವಿನ ಹೋಟೆಲ್ ಒಂದರಲ್ಲಿ ಚಿಕನ್ ಕುರ್ಕುರೆ ತಿಂದಿರುವುದು ಬಿಜೆಪಿ ನಾಯಕರ ಹೊಟ್ಟೆ ಉರಿಸಿದೆ.
ಅರೇ ರಾಹುಲ್ ಗಾಂಧಿ ಯಾತ್ರೆ ಕೈಗೊಂಡಿರುವುದು, ಯಾತ್ರೆಯ ಸಂದರ್ಭದ ಕಟ್ಟುಪಾಡುಗಳನ್ನು ಅರಿತು ಅವರು ಯಾತ್ರೆ ಮಾಡಬೇಕಿತ್ತು. ಯಾತ್ರೆ ಫಲಗಳು ಸಿಗಬೇಕಾದರೆ ಏನು ಮಾಡಬೇಕು ಏನು ಮಾಡಬಾರದು ಅನ್ನುವುದು ಅವರಿಗೆ ಅರಿವಿರಬೇಕು ತಾನೇ.
ರಾಹುಲ್ ಗಾಂಧಿ ನಾನ್ ವೆಜ್ ತಿಂದರೆ ಅದರೆ ಫಲ, ಪ್ರತಿಫಲ ಅವರಿಗೆ ಸಿಗುತ್ತದೆ ಅದ್ಯಾಕೆ ಬಿಜೆಪಿ ನಾಯಕರಿಗೆ ರಾಹುಲ್ ಗಾಂಧಿ ತಟ್ಟೆ ಮೇಲೆ ಕಣ್ಣು ಅನ್ನುವುದೇ ಅರ್ಥವಾಗದ ವಿಚಾರ.
ತಮ್ಮ ಬಹುದಿನಗಳ ಕನಸಾದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ನೇಪಾಳ ತಲುಪಿದ್ದ ರಾಹುಲ್ ಗಾಂಧಿ ಕಾಠ್ಮಂಡುವಿನ ರೆಸ್ಟೋರೆಂಟ್ ಒಂದರಲ್ಲಿ ಚಿಕನ್ ಕುರ್ಕರೆ ತಿಂದಿದ್ದಾರೆ ಅನ್ನುವುದು ಮಾಧ್ಯಮಗಳ ವರದಿ.
ರೆಸ್ಟೋರೆಂಟ್ ನ ವೇಟರ್ ಹೇಳಿದ್ದಾರಿ ಮಾಧ್ಯಮಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಈ ವರದಿ ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಹೋಟೆಲ್ ಆಡಳಿತ ಮಂಡಳಿ, ರಾಹುಲ್ ರೆಸ್ಟೋರೆಂಟ್ ಗೆ ಬಂದಿರುವುದು ನಿಜ. ಆದರೆ ಮಾಂಸಹಾರ ತಿಂದಿದ್ದಾರೆ ಅನ್ನುವುದು ಸುಳ್ಳು, ಅವರು ಪಕ್ಕಾ ಸಸ್ಯಾಹಾರಿ ತಿನಿಸುಗಳನ್ನು ಆರ್ಡರ್ ಮಾಡಿ ಸೇವಿಸಿದ್ದಾರೆ ಎಂದಿದ್ದಾರೆ.
ಆದರೆ ಬಿಜೆಪಿ ಮಾತ್ರ ಕಾಂಗ್ರೆಸ್ ನಾಯಕ ಹಿಂದೂಗಳ ಭಾವನೆಗದೆ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿದೆ.
ಹಿಂದೊಮ್ಮೆ ಸಿದ್ದರಾಮಯ್ಯ ಮಾಂಸಹಾರ ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಆಮೇಲೆ ಏನಾಯ್ತು ಎಂದು ಎಲ್ಲರಿಗೂ ಗೊತ್ತಿದೆ ತಾನೇ. ಮತ್ಯಾಕೆ ತಲೆ ಬಿಸಿ.
ರಾಹುಲ್ ಗಾಂಧಿ ಏನು ಇಷ್ಟವೋ ಅದನ್ನು ತಿನ್ನುತ್ತಾರೆ. ತಿನ್ನುವ ಹಕ್ಕು ಕೂಡಾ ಅವರಿಗಿಲ್ಲ ಅನ್ನುವುದು ಯಾವ ನ್ಯಾಯ ಸ್ವಾಮಿ.
Discussion about this post