ಧ್ರುವ ಸರ್ಜಾ ಅಭಿನಯದ ಮಾರ್ಟಿನ್ (Dhruva sarja martin) ಸಪ್ಟಂಬರ್ 30ರಂದು ಬಿಡುಗಡೆಯಾಗಬೇಕಿತ್ತು
ಉದಯ್ ಕೆ ಮೆಹ್ತಾ ನಿರ್ಮಾಣದ, ಎಪಿ ಅರ್ಜುನ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಮಾರ್ಟಿನ್ (Dhruva sarja martin) ಚಿತ್ರ ಸಪ್ಟಂಬರ್ 30 ರಂದು ಬಿಡುಗಡೆಯಾಗಬೇಕಾಗಿತ್ತು.ಆದರೆ ಚಿತ್ರೀಕರಣವೇ ಮುಕ್ತಾಯವಾಗದ ಹಿನ್ನಲೆಯಲ್ಲಿ ಇದೀಗ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ.
ಅರ್ಜುನ್ ಸರ್ಜಾ ತಾಯಿ, ಧ್ರುವ ಅವರ ಅಜ್ಜಿ ಲಕ್ಷ್ಮಿ ದೇವಮ್ಮ ನಿಧನರಾದ ಕಾರಣ ಶೂಟಿಂಗ್ ಕೆಲಸಕ್ಕೆ ಬ್ರೇಕ್ ನೀಡಲಾಗಿತ್ತು. ಅದಕ್ಕೂ ಮುನ್ನ ಲಕ್ಷ್ಮಿಯವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅಜ್ಜಿಯ ಯೋಗಕ್ಷೇಮ ನೋಡಿಕೊಳ್ಳುವ ನಿಟ್ಟಿನಲ್ಲಿ ಧ್ರುವ ಶೂಟಿಂಗ್ (Dhruva sarja martin) ಕಾರ್ಯಕ್ಕೆ ಹಾಜರಾಗಿರಲಿಲ್ಲ.
ಈ ನಿಟ್ಟಿನಲ್ಲಿ ಶೂಟಿಂಗ್ ಇನ್ನೂ ಬಾಕಿ ಇರುವುದರಿಂದ ಸಪ್ಟಂಬರ್ 30ಕ್ಕೆ ಸಿನಿಮಾ ಬಿಡುಗಡೆ ಮಾಡದಿರಲು ಚಿತ್ರತಂಡ ತೀರ್ಮಾನಿಸಿದೆ. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುವುದಾಗಿ ನಿರ್ಮಾಪಕರು ಹೇಳಿದ್ದಾರೆ.
ಮಾರ್ಟಿನ್ ಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ ಕಾಣಿಸಿಕೊಂಡಿದ್ದಾರೆ. ಕನ್ನಡ ತೆಲುಗು ತಮಿಳು ಸೇರಿ 5 ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ.
ಇದನ್ನೂ ಓದಿ : lakshmi hebbalkar : ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ಮನೆ ಇಲ್ಲ : ದಾವಣಗೆರೆಯಲ್ಲಿ ಸುಳ್ಳು ಹೇಳಿದ್ರ ಲಕ್ಷ್ಮಿ ಹೆಬ್ಬಾಳ್ಕರ್
Praveen Nettar murder : ವಾರ ಕಳೆದರೂ ಪ್ರವೀಣ್ ಹಂತಕರ ಸುಳಿವಿಲ್ಲ : ತನಿಖೆ ಪ್ರಗತಿಯಲ್ಲಿದೆ ಅಂದ ಸಿಎಂ
Praveen Nettar murder ಪ್ರಕರಣವನ್ನು ರಾಜ್ಯ ಪೊಲೀಸರು ಮತ್ತು NIA ತನಿಖೆ ನಡೆಸುತ್ತಿದೆ. ರಾಜಕಾರಣಿಗಳು ಸುಳಿವು ಲಭ್ಯ ಅನ್ನುವ ಹೇಳಿಕೆಗೆ ಅಂಟಿಕೊಂಡಿದ್ದಾರೆ
ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Nettar murder) ಹತ್ಯೆ ಪ್ರಕರಣದ ಬಳಿಕ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆದಿತ್ತು. ಅದರಲ್ಲೂ ರಾಜ್ಯ ಬಿಜೆಪಿಯ ಬುಡವೇ ಅಲ್ಲಾಡಿತ್ತು. ಇದೇ ಕಾರಣಕ್ಕಾಗಿ ಈಗ್ಲೂ ಬುಡ ಅಲ್ಲಾಡುವುದು ನಿಂತಿಲ್ಲ. ಆದರೆ ಬಿಜೆಪಿ ನಾಯಕರು ಪ್ರವೀಣ್ ಹತ್ಯೆ ವಿಚಾರದಲ್ಲಿ ಕೊಟ್ಟ ಭರವಸೆಗಳು ಸುಳಿವು ಲಭ್ಯ ಅನ್ನುವಲ್ಲಿಗೆ ನಿಂತಿದೆ.
ಪ್ರವೀಣ್ ನೆಟ್ಟಾರು ಹತ್ಯೆ (Praveen Nettar murder) ನಡೆದು ವಾರವಾದರೂ ಪ್ರಮುಖ ಹಂತಕರ ಸುಳಿವು ಪತ್ತೆಯಾಗಿಲ್ಲ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಆದಾದ ಬಳಿಕ ಕೇರಳದಲ್ಲಿ ಆರೋಪಿಗಳ ಬಂಧನ ಅನ್ನುವ ಸುದ್ದಿಗಳು ಬಂತು ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.
ಇದನ್ನೂ ಓದಿ : Amit shah : ಶೋಭಾ ಕರಂದ್ಲಾಜೆ ಭೇಟಿ ಬೆನ್ನಲ್ಲೇ ಅಮಿತ್ ಶಾ ಕಚೇರಿಗೆ ದೌಡಾಯಿಸಿದ ನಳಿನ್ ಕುಮಾರ್
TV9 ಸುದ್ದಿ ವಾಹಿನಿ ಸದ್ದಾಂ ಹಾಗೂ ಹ್ಯಾರಿಸ್ (The two were identified as Saddam and Harris) ಅನ್ನುವವರ ಬಂಧನ ಅನ್ನುವ ಸುದ್ದಿ ಪ್ರಸಾರ ಮಾಡಿತ್ತು. (According to TV9 Kannada, Harris, who was arrested on Tuesday, and his gang had failed to kill Nettar earlier) ಆದರೆ ಪೊಲೀಸರು ಇದನ್ನು ಅಧಿಕೃತಗೊಳಿಸಿಲ್ಲ.
ಈ ನಡುವೆ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡಕ್ಕೆ ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿಲ್ಲ ಅನ್ನಲಾಗಿದೆ. ಇನ್ನು ಬಿಜೆಪಿ ನಾಯಕರು ಪ್ರಮುಖ ಆರೋಪಿಗಳ ಸುಳಿವು ಲಭ್ಯವಾಗಿದೆ ಅನ್ನುವುದರಲ್ಲೇ ಕಾಲ ತಳ್ಳುತ್ತಿದ್ದಾರೆ.
ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖಾ ವಿವರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಾಗದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈಗಾಗಲೇ ತನಿಖೆಯನ್ನು NIA ಗೆ ನೀಡಲು ತೀರ್ಮಾನಿಸಲಾಗಿದೆ. ಅದರ ನಡುವೆ ರಾಜ್ಯ ಪೊಲೀಸರ ತನಿಖೆಯೂ ಮುಂದುವರಿದಿದೆ ಅಂದಿದ್ದಾರೆ.
Discussion about this post