ಬಿಗ್ ಬಾಸ್ ಮನೆಯಿಂದ ಮೊದಲ ವಾರದಲ್ಲೇ ಹೊರ ಬಂದಿರುವ ಧನುಶ್ರೀ, ತನ್ನ ಬಿಗ್ ಬಾಸ್ ಜರ್ನಿ ಕುರಿತಂತೆ ಮಾತನಾಡಿದ್ದಾರೆ.
ಹಲವಾರು ವಿಷಯಗಳ ಕುರಿತಂತೆ ಬೆಳಕು ಚೆಲ್ಲಿರುವ ಅವರು, ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಮುಂದೇನು ಅನ್ನುವ ಕುರಿತಂತೆ ನಾನು ಯಾವುದೇ ಪ್ಲಾನ್ ಮಾಡಿಲ್ಲ.
ಪ್ಲಾನ್ ಮಾಡಿದೆಲ್ಲಾ ಕೆಲಸ ಮಾಡೋದಿಲ್ಲ. ಹೀಗಾಗಿ ಬಂದದ್ದು ಬರಲಿ ಮುಂದೆ ಸಾಗೋಣ ಅಂದಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಎಡವಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಧನುಶ್ರೀ, ಬಿಗ್ ಬಾಸ್ ನಾನು ಆಡೋ ಆಟ ಆಗಿರಲಿಲ್ಲ.ಹಾಗಂತ ನಾನು ಲೂಸರ್ ಅಲ್ಲ. ಹೊಂದಿಕೊಳ್ಳಲು ಟೈಮ್ ತೆಗೆದುಕೊಂಡೆ. ಜನರನ್ನು ಮನರಂಜಿಸುವಲ್ಲಿ ಸೋತೆ,
ಮನೆ ಒಳಗಡೆ ಹೋದ ತಕ್ಷಣ ಉಳಿದ ಸದಸ್ಯರನ್ನು ಅರ್ಥ ಮಾಡಿಕೊಳ್ಳಲು ಸಮಯ ಸಾಕಾಗಲಿಲ್ಲ. ಟಾಸ್ಕ್ ಗಳಲ್ಲಿ ಚರ್ಮ ಕಿತ್ತುಕೊಂಡು ಹೋಗೋ ತರ ಆಡಿದೆ. ಆದರೆ ತಲೆ ಖರ್ಚು ಮಾಡಲಿಲ್ಲ ಎಂದು ಮನ ಬಿಚ್ಚಿ ಮಾತನಾಡಿರುವ ಧನುಶ್ರೀ, ಮನೆಯೊಳಗಡೆ ಸಾಕಷ್ಟು ಸೆಲೆಬ್ರೆಟಿಗಳಿದ್ದರು, ಅವರೆಲ್ಲಾ ದೊಡ್ಡವರು ನಾನು ಕೇವಲ ಟಿಕ್ ಟಾಕ್ ಸ್ಟಾರ್, ಹೀಗಾಗಿ ನಾನು ಬೇಗ ಮನೆಯಿಂದ ಹೊರಬರಬೇಕಾಯ್ತು ಅಂದಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ನನ್ನ ಮಟ್ಟಿಗೆ ನಾನು ಪ್ರಯತ್ನ ಪಟ್ಟಿದ್ದೇನೆ. ಆದರೆ ಬಿಗ್ ಬಾಸ್ ಗ್ರೂಪ್ ಇರೋ ಕಡೆ ಕ್ಯಾಮಾರ ದೃಷ್ಟಿ ಇಟ್ಟಿದ್ದರು, ಎರಡು ಮೂರು ಜನ ಇರೋ ಕಡೆ ಫೋಕಸ್ ಮಾಡ್ಲೇ ಇಲ್ಲ. ಮಾತ್ರವಲ್ಲದೆ 24 ಗಂಟೆಯಲ್ಲಿ ಆಗಿರೋದನ್ನು 1 ಹವರ್ ಮಾತ್ರ ತೋರಿಸುತ್ತಾರೆ, ಇದು ನನ್ನ ಎಲಿಮಿನೇಷನ್ ಗೆ ಕಾರಣವಾಗಿರಬಹುದು ಅಂದಿದ್ದಾರೆ.
ಇದೇ ವೇಳೆ ಟ್ರೋಲರ್ ಗಳ ಬಗ್ಗೆ ಮಾತನಾಡಿರುವ ಅವರು, ಅವರು ನನ್ನ ಹತ್ತಿರದಿಂದ ನೋಡಿಲ್ಲ, ಹಾಗಾಗಿ ಟ್ರೋಲ್ ಮಾಡ್ತಾರೆ, ಹಾಗಂತ ಅದು ಅವರ ತಪ್ಪಲ್ಲ. ಅವರ ದೃಷ್ಟಿ ಕೋನದ ಮೇಲೆ ಟ್ರೋಲ್ ಮಾಡ್ತಾರೆ. ಟ್ರೋಲರ್ ಗಳಿಂದ ನಾನು ಬೆಳೆದಿದ್ದೇನೆ. ಹಾಗಾಗಿಯೇ ಎಲ್ಲಾ ಟ್ರೋಲರ್ ಗಳು ಕೆಟ್ಟವರಲ್ಲ ಅಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಟ್ರೋಲ್ ಗಳನ್ನು ನೋಡಿದೆ, ನನಗೇನು ವಿಶೇಷ ಅನ್ನಿಸಲಿಲ್ಲ. ಯಾಕೆಂದರೆ ಅವುಗಳನ್ನು ನಾನು ನಿರೀಕ್ಷೆ ಮಾಡಿದ್ದೆ.
ಈ ಟ್ರೋಲ್ ಗಳಿಂದ ತಾಯಿ ಸ್ವಲ್ಪ ಡಿಸ್ಟರ್ಬ್ ಆಗಿದ್ರು, ಎಷ್ಟಾದ್ರೂ ಮಗಳಲ್ವ,, ಅವರಿಗೆ ಸಮಾಧಾನ ಮಾಡಿದ್ದೇನೆ. ಹೊಟ್ಟೆ ಕಿಚ್ಚಿನಿಂದ ಮಾಡಿರ್ತಾರೆ. ನನ್ನ ಬಗ್ಗೆ ಗೊತ್ತಿಲ್ಲದೆ ಮಾಡಿರ್ತಾರೆ. ಕೆಲವು ಚಿಕ್ಕಮಕ್ಕಳು ಟ್ರೋಲ್ ಮಾಡ್ತಾರೆ ತಲೆ ಕೆಡಿಸಿಕೊಳ್ಳಬೇಡು ಎಂದು ಧೈರ್ಯ ತುಂಬಿದ್ದೇನೆ ಅಂದಿದ್ದಾರೆ.
Discussion about this post