( Dhananjay police) ಕ್ಯಾನ್ಸರ್ ಅನ್ನುವ ಮಹಾಮಾರಿ ಇದೀಗ ಹಳ್ಳಿಯ ಮನೆ ಮನೆಗೂ ಕಾಲಿಟ್ಟಿದೆ. ಜಾಗೃತಿ ಮೂಡಿಸಬೇಕಾದ ವ್ಯವಸ್ಥೆ ಮಾತ್ರ Percentage ಮೇಯುತ್ತಿದೆ.
ಬೆಂಗಳೂರು : ಮಹಾಮಾರಿ ಕ್ಯಾನ್ಸರ್ ರೋಗಕ್ಕೆ ಬೆಂಗಳೂರು ನಗರದ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಮೃತರನ್ನು 2010ರ ಬ್ಯಾಚ್ ನ ಸಬ್ ಇನ್ಸ್ ಪೆಕ್ಟರ್ ಧನಂಜಯ್ ಎಂದು ಗುರುತಿಸಲಾಗಿದೆ. 6 ತಿಂಗಳ ಹಿಂದಷ್ಟೇ ಇನ್ಸ್ ಪೆಕ್ಟರ್ ಹುದ್ದೆಗೆ ಧನಂಜಯ್ ಭಡ್ತಿ ಹೊಂದಿದ್ದರು. ( Dhananjay police)
ಹಲಸೂರು ಗೇಟ್, ಇಂದಿರಾನಗರ ಸೇರಿದಂತೆ ನಗರದ ಅನೇಕ ಠಾಣೆಗಳಲ್ಲಿ ಕೆಲಸ ಮಾಡಿದ್ದ ಧನಂಜಯ್ ಪ್ರಸ್ತುತ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.( Dhananjay police)
ಕ್ಯಾನ್ಸರ್ ರೋಗದ ಕಾರಣದಿಂದ ಕಳೆದ ಹಲವು ತಿಂಗಳುಗಳಿಂದ ಧನಂಜಯ್ ರಜೆಯಲ್ಲಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅವರು ಕ್ಯಾನ್ಸರ್ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ವಿಧಿಯಾಟದ ಮುಂದೆ ಧನಂಜಯ್ ಸೋತಿದ್ದಾರೆ.
Discussion about this post