ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಸಾವನ್ನಪಿದ ವೀರ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಪಾಲಂ ವಾಯುನೆಲೆಯಲ್ಲಿ ಅಂತಿಮ ಸಲ್ಲಿಸಿದರು.
ಮೋದಿಯವರು 1 ನಿಮಿಷ ಮೌನಾಚರಣೆ ಮಾಡುವ ಮೂಲಕ ಇಡೀ ದೇಶದ ಪರವಾಗಿ ಗೌರವ ನಮನ ಸಲ್ಲಿಸಿದರು. ಈ ವೇಳೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಹಾಜರಿದ್ದರು.
ಅಂತಿಮ ನಮನದ ಬಳಿಕ ಎರಡು ವಿಶೇಷ ವಿಮಾನಗಳಲ್ಲಿ ದಾಳಿಯಲ್ಲಿ ವೀರ ಮರಣ ಹೊಂದಿದ ಕರ್ನಾಟಕದ ಸೈನಿಕರು ಸೇರಿದಂತೆ ಆಂಧ್ರ, ತಮಿಳುನಾಡಿನ ವೀರ ಯೋಧರ ಪಾರ್ಥಿವ ಶರೀರಗಳನ್ನು ತವರಿಗೆ ಕಳುಹಿಸಿಕೊಡಲಾಯ್ತು.ದೆಹಲಿಗೆ ಹತ್ತಿರವಿರುವ ಯೋಧರ ಸ್ವಗ್ರಾಮಗಳಿಗೆ ಪಾರ್ಥಿವ ಶರೀರಗಳನ್ನು ರಸ್ತೆ ಮಾರ್ಗದ ಮೂಲಕ ಕಳುಹಿಸಿಕೊಡಲಾಗುತ್ತದೆ.
ಇನ್ನು ಕರ್ನಾಟಕದ ವೀರ ಯೋಧ ಗುರು ಅವರ ಪಾರ್ಥಿವ ಶರೀರ ಮಧ್ಯರಾತ್ರಿ ಬೆಂಗಳೂರಿಗೆ ಬರುವ ಸಾಧ್ಯತೆಗಳಿದೆ.ಬೆಂಗಳೂರಿನ HAL ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನ ಲ್ಯಾಂಡ್ ಆಗಲಿದ್ದು, ಬಳಿಕ ರಸ್ತೆ ಮಾರ್ಗದ ಮೂಲಕ ಮಂಡ್ಯದ ಕೆಎಂ ದೊಡ್ಡಿಗೆ ಪಾರ್ಥಿವ ಶರೀರ ತರಲಾಗುತ್ತದೆ.
ನಾಳೆ ಗುರು ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಸಂಜೆ 4 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ.
Discussion about this post