ಬೆಂಗಳೂರು : ನಟಿ ದೀಪಿಕಾ ಪಡುಕೋಣೆ ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರು.
JNUವಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಮೂಲಕ ದೀಪಿಕಾ ಪಡುಕೋಣೆ ತಾವು ಯಾರನ್ನು ಬೆಂಬಲಿಸುತ್ತೇವೆ ಅನ್ನುವುದು ಬಹಿರಂಗವಾಗಿ ಪ್ರಕಟಿಸಿದ್ದರು.
ಇದೀಗ ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮೆಚ್ಚಿಕೊಂಡಿರುವ ದೀಪಿಕಾ ಪಡುಕೋಣೆ ನೀವು ಜಗತ್ತಿನಲ್ಲಿ ಕಾಣ ಬಯಸುವ ಬದಲಾವಣೆಯನ್ನು ನಿಮ್ಮಲ್ಲಿ ತಂದುಕೊಳ್ಳಿ ಅನ್ನುವ ಮಹಾತ್ಮ ಗಾಂಧೀಜಿಯವರ ಮಾತನ್ನು ಉಲ್ಲೇಖಿಸಿ, ಈ ಪದ ಅಸಾಮಾನ್ಯ ಮಹಿಳೆಯರು ಮತ್ತು ಜಗತ್ತಿನ ಎಲ್ಲಾ ಮಹಿಳೆಯರ ಪಾಲಿಗೆ ನಿಜವಾಗಲಾರಲು ಅಂದಿದ್ದಾರೆ.
ನರೇಂದ್ರ ಮೋದಿಯವರು ತಮ್ಮ 73ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಲವು ವಿಚಾರಗಳಲ್ಲಿ ಮಹಿಳೆಯರ ಭಾಗವಹಿಸುವಿಗೆ ಹೆಚ್ಚಾಗುತ್ತಿರುವ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಜೊತೆಗೆ ಮಹಿಳೆಯರ ಸಾಧನೆಯ ಚಿತ್ರಗಳನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡು, ಭಾರತ ವಮ್ಮ ನಾರಿಯರ ಶಕ್ತಿಗೆ ನಮಿಸುತ್ತದೆ ಎಂದು ಬರೆದುಕೊಂಡಿದ್ದರು.
ಇದೇ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿರುವ ದೀಪಿಕಾ ಪಡುಕೋಣೆ ದೇಶದ ಪ್ರಧಾನಿ ಮನದ ಮಾತಿಗೆ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.
Discussion about this post