ಮುಂಬೈ : ನಟಿ ದೀಪಿಕಾ ಪಡುಕೋಣೆ ಲಾಕ್ ಡೌನ್ ಸಂದರ್ಭದಲ್ಲಿ ಗರ್ಭಿಣಿಯಾದ್ರೆ, ಅನ್ನುವ ಪ್ರಶ್ನೆ ಇದೀಗ ಅಭಿಮಾನಿಗಳನ್ನು ಕಾಡಲಾರಂಭಿಸಿದೆ. ಇದಕ್ಕೆ ಕಾರಣ ಸಿಂಪಲ್ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ದಂಪತಿ ಮುಂಬೈನ ಖಾಸಗಿ ಆಸ್ಪತ್ರೆಯ ಎದುರು ಕಾಣಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುಂಬೈನ ಹಿಂದುಜಾ ಆಸ್ಪತ್ರೆ ಮುಂದೆ ಕಾಣಿಸಿಕೊಂಡ ಬೆನ್ನಲ್ಲೇ ಬಾಲಿವುಡ್ ವೆಬ್ ಸೈಟ್ ಗಳಲ್ಲಿ ಹತ್ತು ಹಲವು ಸುದ್ದಿಗಳು ಹರಿದಾಡಲಾರಂಭಿಸಿದೆ. ಎರಡು ಸಾಧ್ಯತೆಗಳನ್ನು ಈ ವೆಬ್ ಸೈಟ್ ಗಳು ವರದಿ ಮಾಡಿದ್ದು, ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಆಗಿರಬಹುದು ಅನ್ನುವುದು ಕೆಲವರ ವಾದವಾದರೆ, ಯಾವುದೋ ಅನಾರೋಗ್ಯದ ಕಾರಣದಿಂದ ಅವರು ಆಸ್ಪತ್ರೆಗೆ ಭೇಟಿ ನೀಡಿರಬಹುದು ಅನ್ನುವುದು ಮತ್ತೆ ಕೆಲವರ ಮಾತು.
ಕೆಲ ಸಿನಿಮಾದಲ್ಲಿ ದೀಪಿಕಾ ಮತ್ತು ರಣವೀರ್ ಜೊತೆಯಾಗಿ ನಟಿಸಿದ್ದರು. ಇದಾದ ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. 2018ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಇದೀಗ ಮದುವೆ ಆಗಿ ಎರಡೂವರೆ ವರ್ಷ ಕಳೆದಿದೆ.
Discussion about this post