Sunday, March 7, 2021

ಫಾರಂನಲ್ಲಿ ಏನಿದೆ ಬೂಸಾ,ನಾಯಿಗೆ ಹಾಕೋ ಫುಡ್ : ಚುನಾವಣಾಧಿಕಾರಿಗಳ ದಾಳಿಗೆ ದರ್ಶನ್ ಪ್ರತಿಕ್ರಿಯೆ

Must read

- Advertisement -
- Advertisement -

ನನ್ನ ಫಾರಂ ಮೇಲೆ ಐಟಿ ದಾಳಿ ನಡೆದಿಲ್ಲ. ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಸುದ್ದಿ ವಾಹಿನಿಗಳ ಸುಳ್ಳು ಸುದ್ದಿಗೆ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಮತಯಾಚನೆ ನಡುವೆ ಮಾತನಾಡಿದ ಅವರು ಬೆಳಗ್ಗೆ 10 ರಿಂದ 11 ರ ನಡುವೆ ಅಧಿಕಾರಿಗಳು ಬಂದಿದ್ದಾರೆ ಎಂದು ಗೊತ್ತಾಯ್ತು. ಫಾರಂನಲ್ಲಿ ಏನಿದೆ ಸರ್, ಕಡ್ಲೆ ಹಿಂಡಿ, ಬೆಳಗ್ಗೆ ಹಿಂಡಿದ ಹಾಲು, ಬೂಸಾ,ಗೊಬ್ಬರ,ಸೆಗಣಿ, ಪ್ರಾಣಿ ಪಕ್ಷಿಗಳು, ನಾಯಿಗೆ ಆಹಾರ ಬಿಟ್ರೆ ಇನ್ನೇನಿದೆ ಹೇಳಿ ಅಂದಿದ್ದಾರೆ.

ಯಾರೋ ಮಾಹಿತಿ ಕೊಟ್ರಂತೆ ಫಾರಂ ಹೌಸ್ ನಲ್ಲಿ ದುಡ್ಡು ಹಂಚಲಾಗುತ್ತಿದೆ ಅಂತಾ. ಹೀಗಾಗಿ ಚುನಾವಣಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಇನ್ನು ಐಟಿ ದಾಳಿಯಾಗಲು ಸಾಧ್ಯವೇ ಇಲ್ಲ. ನಾನು ನನ್ನ ಎಲ್ಲಾ ತೆರಿಗೆಗಳನ್ನು ಶಿಸ್ತಾಗಿ ಕಟ್ಟಿದ್ದೇನೆ. ಹೀಗಾಗಿ ಆ ಪ್ರಮೇಯ ಬರೋದಿಲ್ಲ. ಬಂದರೂ ಕೂಡಾ ಎಲ್ಲಾ ದಾಖಲೆಗಳು ಸತ್ಯ ಹೇಳ್ತಾವೆ ಅಂದ್ರು.

- Advertisement -
- Advertisement -
- Advertisement -

Latest article