ಸಾಕಷ್ಟು ಮಂದಿ ಪಾದ ಮತ್ತು ಹಿಮ್ಮಡಿ ( cracked heels)ಬಗ್ಗೆ ಆರೈಕೆಯ ಬಗ್ಗೆ ಕಾಳಜಿ ವಹಿಸೋದಿಲ್ಲ
ಹೀಗಾಗಿಯೇ ಹಿಮ್ಮಡಿಯಲ್ಲಿ ಒಡಕು ಕಾಣಿಸಿಕೊಳ್ಳುತ್ತದೆ.ಅದಕ್ಕೆ ವಿಶೇಷ ಉಪಚಾರವಿಲ್ಲದೆ ಹೋದರೆ ಗುಣಮುಖರಾಗಲು ಸಾಧ್ಯವಿಲ್ಲ. ಇನ್ನು ಹಿಮ್ಮಡಿಯ ( cracked heels) ಗಾಯದಲ್ಲಿ ಮಣ್ಣು ಸೇರಿದರೆ ನೋವು ಸೆಳೆತ ಪ್ರಾಣ ಹಿಂಡುತ್ತದೆ.
ಈ ಸಮಸ್ಯೆಗೆ ಮನೆಯ ಅಡುಗೆ ಮನೆಯಲ್ಲೇ ಪರಿಹಾರವಿದೆ. ಆ ಪರಿಹಾರಗಳೇನು ಅನ್ನುವುದನ್ನು ಇವತ್ತು ನೋಡೋಣ.
ಇದನ್ನೂ ಓದಿ : High blood pressure : ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸರಳ ಸೂತ್ರ
ಹಿಮ್ಮಡಿ ಹೇಗಿದೆ ಅನ್ನುವುದರ ಮೇಲೆ ನಿಮ್ಮ ಸ್ವಚ್ಛತೆ ಮತ್ತು ಸೌಂದರ್ಯ ಕಾಳಜಿಯನ್ನು ಅಳೆಯಬಹುದಾಗಿದೆ. ಹೀಗಾಗಿಯೇ ಸ್ನಾನ ಮಾಡುವ ಹೊತ್ತಿನಲ್ಲಿ ನಿಮ್ಮ ಪಾದಗಳ ಆರೈಕೆಗೆ ಒಂದಿಷ್ಟು ಸಮಯ ಮೀಸಲಾಗಿಡಬೇಕು.
ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ನಿಮ್ಮ ಪಾದಗಳನ್ನು ಇಡಿ. ನಂತರ ಹಿಮ್ಮಡಿ ಉಚ್ಚುವ ಬ್ರೆಶ್ ಅಥವಾ ಒರಟು ಕಲ್ಲಿನಿಂದ ಮೃದುವಾಗಿ ಉಜ್ಜಿ. ಇದರಿಂದಾಗಿ ಹಿಮ್ಮಡಿಯಲ್ಲಿರುವ ಸತ್ತ ಚರ್ಮಗಳು ಉದುರುತ್ತವೆ. ನಂತರ ತಣ್ಣೀರಿನಲ್ಲಿ ಕಾಲು ಮಾಯ್ಚುರೈಸರ್ ಕ್ರೀಮ್ ಹಚ್ಚಿ.
ಮುಂಜಾನೆ ಸ್ನಾನವಾದ ಬಳಿಕ ಹಾಗೂ ರಾತ್ರಿ ಮಲಗುವ ಮುನ್ನ ಮಾಯ್ಚುರೈಸರ್ ಅನ್ನು ನಿಮ್ಮ ಕಾಲುಗಳಿಗೆ ಹಚ್ಚಿಕೊಳ್ಳಿ. ಇದರಿಂದ ಚರ್ಮ ಒಣಗುವುದು ಮತ್ತು ಬಿರುಕಾಗುವುದನ್ನು ತಡೆಯಬಹುದಾಗಿದೆ.
ತೆಂಗಿನೆಣ್ಣೆಯನ್ನು ಹಿಮ್ಮಡಿಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಇದರಿಂದ ಹಿಮ್ಮಡಿಯ ಬಿರುಕು ಸಮಸ್ಯೆ ಗುಣಮುಖವಾಗುವುದು. ಉರಿಯೂತ ಮತ್ತು ನೋವಿಗೂ ಇದು ಮುಕ್ತಿ ನೀಡುತ್ತದೆ. ತೆಂಗಿನ ಎಣ್ಣೆಯ ಪಾದಗಳ ಮಸಾಜ್ ನಿಂದ ಪಾದದ ಆರೋಗ್ಯ ವೃದ್ಧಿಸುತ್ತದೆ. ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಹಾಗೂ ಬ್ಯಾಕ್ಟೀರಿಯಾಗಳ ನಾಶಮಾಡುವ ಗುಣವಿದೆ.
ಜೇನುತುಪ್ಪದಲ್ಲಿ ಗಾಯ ಗುಣಪಡಿಸುವ ಗುಣವಿದೆ. ಬ್ಯಾಕ್ಟೀರಿಯಾ ವಿರೋಧಿ ಗುಣವು ಜೇನುತುಪ್ಪದಲ್ಲಿದೆ. ಹೀಗಾಗಿ ಅರಿಶಿನದೊಂದಿಗೆ ಜೇನುತುಪ್ಪ ಮಿಕ್ಸ್ ಮಾಡಿ ದಿನದಲ್ಲಿ ಎರಡು ಬಾರಿ ಹಚ್ಚುವುದರಿಂದ ಹಿಮ್ಮಡಿಯ ಒಡಕು ನಿವಾರಣೆಯಾಗುತ್ತದೆ.
ನಾಳಿನ ಸಂಚಿಕೆಯಲ್ಲಿ ಹಿಮ್ಮಡಿ ಒಡಕು ಪರಿಹಾರಕ್ಕೆ ಮತ್ತಷ್ಟು ಟಿಪ್ಸ್ ಗಳನ್ನು ನೀಡುತ್ತೇವೆ. ಮರೆಯದೇ ಓದಿ.
Discussion about this post