ನವದೆಹಲಿ : ಕೊರೋನಾ ಮೂರನೇ ಅಲೆ ಮಕ್ಕಳನ್ನೇ ಟಾರ್ಗೇಟ್ ಮಾಡಲಿದೆ ಅನ್ನುವ ತಜ್ಞರ ವರದಿಯ ಬೆನ್ನಲ್ಲೇ ಮಕ್ಕಳಿಗೆ ಯಾವಾಗ ಲಸಿಕೆ ಬರುತ್ತದೋ ಎಂದು ಜನ ಕಾಯುತ್ತಿದ್ದಾರೆ. ಅದರಲ್ಲೂ ಪುಟ್ಟ ಪುಟ್ಟ ಕಂದಮ್ಮಗಳಿರುವ ಪೋಷಕರಂತು ಒಂದ್ಸಲ ಮಕ್ಕಳಿಗೆ ಲಸಿಕೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಈ ನಡುವೆ ಈಗ ನಡೆಯುತ್ತಿರುವ ಸಂಶೋಧನೆಗಳ ಪ್ರಕಾರ ಡಿಸೆಂಬರ್ ಹೊತ್ತಿಗೆ ಮಕ್ಕಳಿಗೆ ಲಸಿಕೆ ಲಭ್ಯವಾಗಬಹುದು ಅನ್ನುವ ನಿರೀಕ್ಷೆಗಳಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್ ಬಂದಿದ್ದು, ಆಗಸ್ಟ್‌ನಲ್ಲಿ ಮಕ್ಕಳಿಗೆ ಕೊರೋನ ವೈರಸ್ ಲಸಿಕೆ ವಿತರಣೆ ಪ್ರಾರಂಭವಾಗುವ ಸಾಧ್ಯತೆಗಳಿದೆ ಅನ್ನಲಾಗಿದೆ.ಈ ಬಗ್ಗೆ ANI ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಸಂಸದೀಯ ಸಭೆಯಲ್ಲಿ ಮಾತನಾಡಿದ ನೂತನ ಆರೋಗ್ಯ ಸಚಿವ ಮಾಂಡವಿಯಾ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಆಗಸ್ಟ್ ನಿಂದ ಭಾರತದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಪ್ರಾರಂಭವಾಗಲಿದೆ. ಈಗ ವಯಸ್ಕರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಜಾರಿಯಲ್ಲಿದೆ ಅಂದಿದ್ದಾರೆ. ಈ ಹಿಂದೆ, ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಸೇರಿ ಸಪ್ಟಂಬರ್‌ನಲ್ಲಿ ಮಕ್ಕಳ ಲಸಿಕೆ ಬರಲಿದೆ ಅಂದಿದ್ದರು.
Discussion about this post