ನವದೆಹಲಿ : ದೇಶದಲ್ಲಿ ಇದೀಗ ಕೊರೋನಾ ಸೋಂಕಿನ ನಾಲ್ಕನೇ ಅಲೆಯ ಭೀತಿ ಶುರುವಾಗಿದ್ದು, ಪೂರಕ ಅನ್ನುವಂತೆ ಕಳೆದ ಕೆಲ ದಿನಗಳಿಂದ ಸೋಂಕಿನ ಪ್ರಮಾಣ ಕೂಡಾ ಏರಲಾರಂಭಿಸಿದೆ. ಶನಿವಾರ ದೇಶದಲ್ಲಿ 8329 ಬೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ. ಜೂನ್ 1 ರಂದು ದೇಶದಲ್ಲಿ 2745 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿತ್ತು.
ಇನ್ನು ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿಲ್ಲ. ಜೂನ್ 11 ರಂದು 562 ಪ್ರಕರಣ ದಾಖಲಾಗಿದೆ. ಜೂನ್ 1 ರಂದು ಈ ಸಂಖ್ಯೆ ಕೇವಲ 178 ಆಗಿತ್ತು. ಈ ಮೂಲಕ ಕಳೆದ 10 ದಿನಗಳಲ್ಲಿ ಶೇ 300ರಷ್ಟು ಸೋಂಕು ಏರಿದಂತಾಗಿದೆ.
ಇನ್ನು ದೇಶದಲ್ಲಿ ಶನಿವಾರ 10 ಸೋಂಕಿತರು ಮೃತಪಟ್ಟಿದ್ದಾರೆ. ಕೇರಳ. ದೆಹಲಿ, ಗುಜರಾತ್, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಿಂದ ಸಾವಿನ ವರದಿಯಾಗಿದೆ. ಮಾತ್ರವಲ್ಲದೆ ಕೊರೋನಾ ಗೆಲ್ಲುವವರ ಸಂಖ್ಯೆಯೂ ಇದೀಗ ಇಳಿಮುಖವಾಗತೊಡಗಿದೆ. ಈ ಮೂಲಕ ಸಕ್ರಿಯ ಪ್ರಕರಣ ಸಂಖ್ಯೆ ಏರಲಾರಂಭಿಸಿದೆ.
Discussion about this post