ನವದೆಹಲಿ : ಕೊರೋನಾ ಕುರಿತಂತೆ ಜಾಗೃತಿ ಮೂಡಿಸಲು ಪ್ರಾರಂಭಿಸಿದ್ದ ಕೋವಿಡ್ ಕಾಲರ್ ಟ್ಯೂನ್ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ. ಈ ಮೂಲಕ 2 ವರ್ಷಗಳಿಂದ ಆಲಿಸುತ್ತಿದ್ದ, “ ನಿಮಗೆ ಕೆಮ್ಮು ಜ್ವರ ಇದೆಯೇ ಅನ್ನುವ ಮಾತುಗಳಿಗೆ ಬ್ರೇಕ್ ಬೀಳಲಿದೆ.
ಈ ಬಗ್ಗೆ ಟೆಲಿಕಾಂ ಕಂಪನಿಗಳು ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ದೂರಸಂಪರ್ಕ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಇಲಾಖೆ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಈ ಕಾಲರ್ ಟ್ಯೂನ್ ನಿಂದ ತುರ್ತು ಕರೆಗಳಿಗೆ ತೊಂದರೆಯಾಗುತ್ತಿದೆ. ಜೊತೆಗೆ ದೇಶದಲ್ಲಿ ಕೊರೋನಾ ಕುರಿತಂತೆ ಸಾಕಷ್ಟು ಜಾಗೃತಿಯೂ ಮೂಡಿದೆ. ಮಾತ್ರವಲ್ಲದೆ ಕೊರೋನಾ ಸೋಂಕಿನ ಅಬ್ಬರವೂ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆಯಂತೆ.
Discussion about this post