Corona alert ಕೊರೋನಾ ಸತ್ತಿಲ್ಲ..ಇನ್ನೂ ಜೀವಂತವಿದೆ. ಹೀಗಾಗಿ 7 ರಾಜ್ಯಗಳಿಗ ಎಚ್ಚರಿಕೆ ರವಾನೆಯಾಗಿದೆ
ನವದೆಹಲಿ : ಎರಡನೇ ಡೋಸ್ ಆಗಿದೆ, ಬೂಸ್ಟರ್ ಡೋಸ್ ಹಾಕಿಕೊಂಡಿದ್ದೇವೆ ಎಂದು ನಿರ್ಲಕ್ಷ್ಯ ವಹಿಸಿದ್ರೆ ಎಚ್ಚರ. (Corona alert )ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರೇ ಮೂರನೇ ಸಲ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ದೇಶದಲ್ಲಿ ಕೊರೋನಾ ಸೋಂಕು ಪ್ರಕರಣದಲ್ಲಿ ತೀವ್ರ ಏರಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ 7 ರಾಜ್ಯಗಳಿಗೆ ಎಚ್ಚರಿಕೆಯ (Corona alert) ಸಂದೇಶ ರವಾನಿಸಿದೆ. ಕೊರೋನಾ ಟೆಸ್ಟಿಂಗ್ ಅನ್ನು ಹೆಚ್ಚಿಸೆ, ಲಸಿಕೆ ವಿತರಣೆಗೆ ವೇಗ ಕೊಡಿ ಎಂದು ಸೂಚನೆಯನ್ನು ಕೂಡಾ ನೀಡಲಾಗಿದೆ
ಇದನ್ನೂ ಓದಿ : Kolar rss SP Devaraj : ಕೋಲಾರದಲ್ಲಿ RSS ಕಾರ್ಯಕರ್ತನಿಗೆ ಇರಿತ : ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಎಸ್ಪಿ ದೇವರಾಜ್ ದರ್ಪ
ಕರ್ನಾಟಕ,ಕೇರಳ, ತಮಿಳುನಾಡು, ದೆಹಲಿ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ರವಾನಿಸಿದ್ದು ಈ ಏಳೂ ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇ 10ನ್ನು ದಾಟಿದೆ, ಜೊತೆಗೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ರಾಕೆಟ್ ವೇಗ ಪಡೆದುಕೊಳ್ಳುತ್ತಿದೆ ಅಂದಿದೆ.
ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಮಾರುಕಟ್ಟೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಜನ ಸೇರುತ್ತಾರೆ. ಇಂತಹ ಪರಿಸ್ಥಿತಿ ಸೋಂಕು ಸುಲಭವಾಗಿ ಹರಡಲಿದೆ. ಹೀಗಾಗಿ ನಿಗಾ ವಹಿಸಿ ಅಂದಿರುವ ಕೇಂದ್ರ ಆರೋಗ್ಯ ಇಲಾಖೆ ಸೋಂಕಿನ ಲಕ್ಷಣಗಳು ಬದಲಾಗಿದೆ. ಹೀಗಾಗಿ ವಿಷಮ ಶೀತ ಜ್ವರ, ಉಸಿರಾಟದ ಸಮಸ್ಯೆ ಬಗ್ಗೆ ನಿಗಾ ವಹಿಸಿ ಅಂದಿದೆ.
ಜುಲೈ ತಿಂಗಳೊಂದರಲ್ಲಿ ದೇಶದಲ್ಲಿ ಕೊರೋನಾ ಸೋಂಕಿನಿಂದಾಗಿ ಸಾವಿನ ಪ್ರಮಾಣ ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ 1241 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಮೇ ಮತ್ತು ಜೂನ್ ತಿಂಗಳಲ್ಲಿ ಸಂಭವಿಸಿದ ಸಾವಿನ ಸಂಖ್ಯೆಗೆ ಇದು ಸಮವಾಗಿದೆ. ಮೇ ತಿಂಗಳಲ್ಲಿ 827 ಮಂದಿ ಮೃತಪಟ್ಟಿದ್ರೆ, ಜೂನ್ ನಲ್ಲಿ ಈ ಸಂಖ್ಯೆ 486ಕ್ಕೆ ಇಳಿದಿತ್ತು.
ಇದನ್ನೂ ಓದಿ : Zee Kannada Sorry : ಕರಾವಳಿಗರ ಹೋರಾಟಕ್ಕೆ ಜಯ : ಯಕ್ಷ ಪ್ರೇಮಿಗಳ ಮುಂದೆ ಮಂಡಿಯೂರಿದ ಝೀ ಕನ್ನಡ
Discussion about this post