ನವದೆಹಲಿ : ಕೊರೋನಾ ಕಾರಣದಿಂದ ತನ್ನ ಗಡಿಯನ್ನು ಮುಚ್ಚಿದ್ದ ಉತ್ತರ ಕೊರಿಯಾ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಚೀನಾ ಹೊರತು ಪಡಿಸಿದರೆ ವಿಶ್ವದ ಎಲ್ಲಾ ದೇಶಗಳೊಂದಿಗೆ ಉತ್ತರ ಕೊರಿಯಾ ಸಂಬಂಧವನ್ನು ಕಡಿದುಕೊಂಡಿದೆ.
ಈ ನಡುವೆ ಉತ್ತರ ಕೊರಿಯಾದಲ್ಲಿ ಭಾರೀ ಪ್ರವಾಹ ಕೂಡಾ ಬಂದಿದ್ದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ವಿದೇಶಗಳಿಂದ ಅದ್ಯಾವ ವಸ್ತುಗಳು ಆಮದಾಗುತ್ತಿಲ್ಲ ಅಂದ ಮೇಲೆ ಸಹಜವಾಗಿಯೇ ದರ ಏರಿಕೆಯಾಗಲಾರಂಭಿಸಿದೆ.
ಪ್ರಸ್ತುತ ಒಂದು ಕಾಫಿ ಬೆಲೆ 7381 ರೂ, 1 ಕೆಜಿ ಬಾಳೆಹಣ್ಣಿನ ಬೆಲೆ 3300 ರೂ ಗೆ ತಲುಪಿದೆ. ಬೆಲೆ ಏರಿಕೆಯಿಂದ ಜನ ಕಂಗಾಲಾಗಿ ಹೋಗಿದ್ದು, ಆಹಾರ, ಪೆಟ್ರೋಲ್ ಹಾಗೂ ರಸಗೊಬ್ಬರ ಸಲುವಾಗಿ ಚೀನಾದತ್ತ ಮುಖ ಮಾಡಿ ಕೂತಿದೆ. ಆದರೆ ಕೊರೋನಾ ಬಳಿಕ ಚೀನಾ ಗಡಿಯನ್ನೂ ಮುಚ್ಚಲಾಗಿದೆ. ಈ ಕಾರಣದಿಂದ ಅಗತ್ಯ ವಸ್ತುಗಳ ಪೂರೈಕೆಯೂ ನಿಂತು ಹೋಗಿದೆ.
ರಸಗೊಬ್ಬರ ಕೊರತೆಯ ಕಾರಣದಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆ ಎದುರಾಗಿದೆ. ಹೀಗಾಗಿ ಸರ್ವಾಧಿಕಾರ ಸರ್ಕಾರ ಇದೀಗ ಮೂತ್ರ ದೇಣಿಗೆಗೆ ಆದೇಶ ಹೊರಡಿಸಿದೆ. ರೈತರಿಂದಲೇ ಮೂತ್ರ ಸಂಗ್ರಹಿಸಿ ರಸಗೊಬ್ಬರ ಉತ್ಪಾದಿಸಲು ಕಿಮ್ ಜೊಂಗ್ ಉನ್ ನಿರ್ಧರಿಸಿದ್ದು, ಪ್ರತಿಯೊಬ್ಬ ರೈತನೂ ನಿತ್ಯ 2 ಲೀಟರ್ ಮೂತ್ರವನ್ನು ದೇಣಿಗೆಯಾಗಿ ನೀಡಬೇಕು.
Discussion about this post