ಬೆಂಗಳೂರು : ಜುಲೈ 19ವರೆಗೆ ಜಾರಿಯಲ್ಲಿರುವ ಅನ್ಲಾಕ್ 3.0 ನಾಳೆ ಕೊನೆಗೊಳ್ಳಲಿದೆ. ಹೀಗಾಗಿ Unlock 4.O ಜಾರಿ ಕುರಿತಂತೆ ಅಧಿಕಾರಿಗಳು ಈಗಾಗಲೇ ನೀಲಿ ನಕ್ಷೆ ರಚಿಸಿದ್ದು, ಮುಖ್ಯಮಂತ್ರಿಗಳು ಅಧಿಕಾರಿಗಳ ಪ್ರಸ್ತಾವನೆ ಸಮ್ಮತಿಸಿದ್ದಾರೆ.
ಈ ನಡುವೆ ಕೊರೋನಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಸಿಎಂ ಯಡಿಯೂರಪ್ಪ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, Unlock 4.O ಪ್ರಕಾರ ರಾಜ್ಯದಲ್ಲಿ ಮತ್ತಷ್ಟು ಸಡಿಲಿಕೆ ಘೋಷಿಸಲಾಗಿದೆ.
ಥಿಯೇಟರ್, ಶಾಲೆಗಳನ್ನು ಹೊರತುಪಡಿಸಿ ಇಡೀ ಕರ್ನಾಟಕ ಸಂಪೂರ್ಣ ತೆರೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಮಾಹಿತಿಗಳ ಪ್ರಕಾರ ಶೇ50ರಷ್ಟು ಸೀಟು ಭರ್ತಿಯೊಂದಿಗೆ ಥಿಯೇಟರ್ ತೆರೆಯಲು ಅನುಮತಿ ನೀಡಲಾಗಿದ್ದು, ಜುಲೈ 26 ರಿಂದ ಪದವಿ ತರಗತಿಗಳನ್ನು ಪ್ರಾರಂಭಿಸಲು ಸಮ್ಮಿತಿಸಲಾಗಿದೆ.
ನೈಟ್ ಕರ್ಪ್ಯೂ ರಾತ್ರಿ 10 ರಿಂದ ಬೆಳಗ್ಗೆ 5 ರ ವರಗೆ ವಿಧಿಸಲು ತೀರ್ಮಾನಿಸಲಾಗಿದೆ. ಇನ್ನು ಜುಲೈ.26ರಿಂದ ಉನ್ನತ ಶಿಕ್ಷಣವನ್ನು ಪ್ರಾರಂಭ ಮಾಡಲು ಅವಕಾಶ ನೀಡಲಾಗಿದ್ದು. ಒಂದು ಡೋಸ್ ಲಸಿಕೆ ಹಾಕಿಸಿಕೊಂಡವರೆಗೆ ಮಾತ್ರ ಕಾಲೇಜಿಗೆ ಬರೋದಕ್ಕೆ ಅವಕಾಶ ನೀಡಲಾಗಿದೆ.ಇನ್ನು ಈ ಸಭೆಯಲ್ಲಿ ಪಬ್ ಮತ್ತು ಈಜುಕೊಳ ತೆರೆಯಲು ಅನುಮತಿ ನೀಡಿಲ್ಲ.
Discussion about this post