ಕ್ಲಬ್ ಹೌಸ್ ನಲ್ಲಿ ಸೋಮವಾರ ಸಾಕಷ್ಟು ಚರ್ಚೆಗೆ ಒಳಗಾಗಿದ್ದು ವಿಶ್ವವಾಣಿ ಕ್ಲಬ್ ನ ಕಾರ್ಯಕ್ರಮ. ಪತ್ರಕರ್ತ ವಿಶ್ವೇಶ್ವರ ಭಟ್ ಈ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರವನ್ನೂ ಕೊಟ್ಟಿದ್ದರು. ಅಪ್ಪು ಆತ್ಮದೊಂದಿಗೆ ಡಾ. ರಾಮಚಂದ್ರ ಗುರೂಜಿ ಅನ್ನುವ ಟೈಟಲ್ ಕೊಟ್ಟು ಜನರನ್ನು ಆಕರ್ಷಿಸುವ ಪ್ರಯತ್ನವನ್ನು ನಡೆಸಿದ್ದರು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಟ್ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದರು.
ಈ ಪರ ವಿರೋಧ ಚರ್ಚೆಯ ನಡುವೆ ಸಂಜೆ 7 ಗಂಟೆ ಕ್ಲಬ್ ಹೌಸ್ ನಲ್ಲಿ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸ್ವಯಂಘೋಷಿತ ಆತ್ಮತಜ್ಞ ಡಾ. ರಾಮಚಂದ್ರ ಗುರೂಜಿ ಇನ್ನೇನು ಪುನೀತ್ ರಾಜ್ ಕುಮಾರ್ ಆತ್ಮದ ಜೊತೆ ಮಾತುಕತೆ ನಡೆಸುತ್ತಾರೆ ಎಂದು ಜನ ತುದಿಗಾಲಿನಲ್ಲಿ ನಿಂತಿದ್ದರು.
ಆದರೆ ಕಾರ್ಯಕ್ರಮದಲ್ಲಿ ರಾಮಚಂದ್ರ ಗುರೂಜಿ ನಿರಾಶೆ ಮೂಡಿಸಿದ್ದು, ನಾನು ಇವತ್ತಿನ ಕಾರ್ಯಕ್ರಮದಲ್ಲಿ ಪುನೀತ್ ಆತ್ಮದ ಜೊತೆ ಮಾತುಕತೆ ನಡೆಸುತ್ತಿಲ್ಲ, ನಡೆಸುವುದಿಲ್ಲ ಅಂದಿದ್ದಾರೆ. ಅದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದು ಹೀಗೆಲ್ಲಾ ಆತ್ಮದ ಜೊತೆಗೆ ಮಾತುಕತೆ ನಡೆಸಬೇಕಾದರೆ ಅವರ ಕುಟುಂಬದ ಅನುಮತಿ ಬೇಕಾಗುತ್ತದೆ. ಮಾತ್ರವಲ್ಲದೆ ಹೀಗೆಲ್ಲಾ ಆತ್ಮಗಳ ಜೊತೆಗೆ ಮಾತುಕತೆ ನಡೆಸಬೇಕಾದರೆ ಅದು ಅನುಮಾನಸ್ಪದ ಮರಣವಾಗಿರಬೇಕು. ಆದರೆ ಪುನೀತ್ ಅವರದ್ದು ಅಸಹಜ ಸಾವಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿರುವುದರಿಂದ ಆತ್ಮದ ಜೊತೆಗೆ ಮಾತುಕತೆ ನಡೆಸುವು ಅಗತ್ಯವಿಲ್ಲ ಅಂದಿದ್ದಾರೆ.
Discussion about this post