ಈಗಾಗಲೇ ಇಂತಹ ಆದೇಶ ಅನೇಕ ರಾಜ್ಯಗಳಲ್ಲಿ ಜಾರಿಯಾಗಿದೆ. ಇದೀಗ ಕರ್ನಾಟಕದ ಸರದಿ (Class 1 age criteria )
ಬೆಂಗಳೂರು : ಇನ್ನು ಮುಂದೆ ಮಕ್ಕಳನ್ನು 1ನೇ ತರಗತಿಗೆ ಸೇರಿಸಬೇಕಾದರೆ 6 ವರ್ಷ ತುಂಬಿರಬೇಕು ಎಂದು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.(Class 1 age criteria )
ಈ ಸಂಬಂಧ ನೂತನ ವಯೋಮಿತಿ ನಿಗದಿಪಡಿಸಿ 1ನೇ ತರಗತಿಗೆ ಸೇರುವ ಮಕ್ಕಳಿಗೆ ಜೂನ್ 1 ನೇ ತಾರೀಖಿಗೆ 6 ವರ್ಷ ತುಂಬಿರಬೇಕು ಎಂದು ಸರ್ಕಾರ ಹೇಳಿದೆ. ಈ ಹಿಂದೆ ಈ ಮಿತಿ 5 ವರ್ಷ 5 ತಿಂಗಳು ಮತ್ತು 5 ವರ್ಷ 10 ತಿಂಗಳು ಎಂದಾಗಿತ್ತು.(Class 1 age criteria )
ಇದನ್ನೂ ಓದಿ : praveen nettar : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮೇಲೆ ದಾಳಿ : ಸುಳ್ಯದ ಬೆಳ್ಳಾರೆಯಲ್ಲಿ ಘಟನೆ
RTE ಶಿಕ್ಷಣ ಕಾಯ್ದೆ ಮತ್ತು ಕಡ್ಡಾಯ ಶಿಕ್ಷಣ ನಿಯಮ 2012ರ ಅಡಿಯಲ್ಲಿ ರಾಜ್ಯ ಸರ್ಕಾರ ಈ ವಯೋಮಿತಿ ನಿಗದಿ ಮಾಡಿದೆ.

ಆದರೆ ಖಾಸಗಿ ಶಾಲೆಗಳು ನಡೆಸುವ ಪ್ರೀ ನರ್ಸರಿ, LKG, UKG ಗಳ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಈ ಆದೇಶದೊಂದಿಗೆ ಪ್ರೀ ನರ್ಸರಿ, LKG, UKGಗೆ ಮಕ್ಕಳನ್ನು ಸೇರಿಸಲು ಎಷ್ಟು ವಯಸ್ಸಾಗಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿರುತ್ತಿದ್ರೆ ಚೆನ್ನಾಗಿತ್ತು.
Discussion about this post