ಹಾಸನ ತಹಶೀಲ್ದಾರ್ ಶ್ವೇತಾ ಅವರು ಕಚೇರಿಯಲ್ಲಿ ಇರಲಿಲ್ಲ
ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಹಾಸನ ತಹಶೀಲ್ದಾರ್ ಶ್ವೇತಾ ಅವರ ಬಂಧನಕ್ಕೆ ಹಾಸನ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ಪ್ರಕರಣವೊಂದರ ಸಂಬಂಧ ತಹಶೀಲ್ದಾರ್ ಅವರು ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶ್ವೇತಾ ಅವರ ಬಂಧನಕ್ಕೆ ಸಿವಿಲ್ ಕೋರ್ಟ್ ಆದೇಶಿಸಿತ್ತು. ಜೊತೆಗೆ ಇದೇ ಪ್ರಕರಣದಲ್ಲಿ ತಹಶೀಲ್ದಾರ್ ನ್ಯಾಯಾಲಯಕ್ಕೆ ಗೈರು ಹಾಜರಾಗಿರುವುದರ ಬಗ್ಗೆಯೂ ಕೋರ್ಟ್ ಅಸಮಾಧಾನ ಹೊರ ಹಾಕಿದ್ದು, ಸಮನ್ಸ್ ಪಡೆಯದ ನಿರ್ಲಕ್ಷ್ಯ ತೋರಿದ ಆರೋಪವೂ ತಹಶೀಲ್ದಾರ್ ಮೇಲಿದೆ. ಹೀಗಾಗಿ ತಹಶೀಲ್ದಾರ್ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲು ಆದೇಶಿಸಲಾಗಿದೆ.
ಇದನ್ನೂ ಓದಿ : ಊಟ ಇಲ್ಲ ಅನ್ನಬೇಡಿ : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಕಮಿಟಿಗೆ ಶಾಸಕರ ಸೂಚನೆ
ಹಾಸನ ಸಿವಿಲ್ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶ್ವೇತಾ ಅವರನ್ನು ಬಂಧಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಕೋರ್ಟ್ ತ ವಕೀಲರು ಶ್ವೇತಾ ಅವರ ಕಚೇರಿಗೆ ತೆರಳಿದ್ದಾರೆ. ಈ ವೇಳೆ ತಹಶೀಲ್ದಾರ್ ಅವರು ಕಚೇರಿಯಲ್ಲಿ ಇರಲಿಲ್ಲ. ಪ್ರಸ್ತುತ ಕಚೇರಿಯಲ್ಲಿ ಇರದ ಕಾರಣ ತಹಶೀಲ್ದಾರ್ ಅವರ ಬಂಧನ ಸಾಧ್ಯವಾಗಿಲ್ಲ.
ಕೆಲ ದಿನಗಳ ಹಿಂದಷ್ಟೇ ಇದೇ ತಹಶೀಲ್ದಾರ್ ಶ್ವೇತಾ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ಅವೈಜ್ಞಾನಿಕ ವರ್ಗಾವಣೆ ನೀತಿಯ ವಿರುದ್ಧ ಸಿಡಿದೆದಿದ್ದ ಶ್ವೇತಾ ಅವರು ಕೆಎಟಿ ಮೊರೆ ಹೋಗಿದ್ದರು.
ಇದನ್ನೂ ಓದಿ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ
ಕಂದಾಯ ಇಲಾಖೆ ಕೆಲ ದಿನಗಳ ಹಿಂದೆ ಹಾಸನ ತಹಶೀಲ್ದಾರ್ ಶ್ವೇತಾ ಸೇರಿದಂತೆ 13 ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. ಈ ಆದೇಶವನ್ನು ಶ್ವೇತಾ ಕೆಎಟಿಯಲ್ಲಿ ಪ್ರಶ್ನೆ ಮಾಡಿದ್ದರು. ತಾನು ಗ್ರೇಡ್-1 ತಹಶೀಲ್ದಾರ್ ಆಗಿದ್ದು, ನನ್ನ ಸ್ಥಾನಕ್ಕೆ ಗ್ರೇಡ್-2 ತಹಶೀಲ್ದಾರ್ ನೇಮಕ ಮಾಡಲಾಗಿದೆ. ಮಾತ್ರವಲ್ಲದೆ, ಈ ಹುದ್ದೆಗೆ ಸರ್ಕಾರ 8 ತಿಂಗಳ ಹಿಂದಷ್ಟೇ ನನ್ನ ನೇಮಕ ಮಾಡಿತ್ತು. ಅವಧಿಗೂ ಮುಂಚೆ ವರ್ಗಾವಣೆ ಸರಿಯಲ್ಲ ಅನ್ನುವುದು ಶ್ವೇತಾ ಅವರ ವಾದ.
ಶ್ವೇತಾ ಅವರ ವಾದವನ್ನು ಪುರಸ್ಕರಿಸಿದ್ದ ಕೆಎಟಿ, ಸರ್ಕಾರದ ವರ್ಗಾವಣೆ ಆದೇಶಕ್ಕೆ ತಡೆ ನೀಡಿತ್ತು. ಮಾತ್ರವಲ್ಲದೆ ಈ ಹಿಂದಿನ ಹುದ್ದೆಯಲ್ಲೇ ಮುಂದುವರಿಯಲು ಅನುವು ಮಾಡಿಕೊಡಲಾಗಿತ್ತು.
Discussion about this post