ಒಂದು ಮಗು ಕಾರಿನಡಿಗೆ ಬಿದ್ರೆ ಮತ್ತೊಂದು ಮಗುವನ್ನು ವಿದ್ಯುತ್ ಬಲಿ ಪಡೆದಿದೆ. ( children death in bengaluru ) ಹೀಗಾಗಿ ಮಕ್ಕಳ ಬಗ್ಗೆ ಎಚ್ಚರವಾಗಿರಿ, ಮಕ್ಕಳ ಮೇಲೆ ಹದ್ದಿನಕಣ್ಣಿಡಿ ಅನ್ನೋದು
ಬೆಂಗಳೂರು : ಆಟವಾಡುತ್ತಿದ್ದ ಮಗುವಿಗೆ ಕಾರು ಡಿಕ್ಕಿ ಹೊಡೆದು ನಾಲ್ಕೂವರೆ ವರ್ಷದ ಮಗು ಮೃತಪಟ್ಟ ಘಟನೆ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾದರಮಂಗಲದ ಮಹಾ ಶ್ರೀನಿವಾಸ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ( children death in bengaluru )
ಅಪಾರ್ಟ್ ಮೆಂಟ್ ನಿವಾಸಿ ದೀಪು ಜೋಶ್ ಅನ್ನುವವರು ತಮ್ಮ ಕಾರನ್ನು ಅಪಾರ್ಟ್ ಮೆಂಟ್ ನಿಂದ ಹೊರ ತಂದಿದ್ದಾರೆ. ಈ ವೇಳೆ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ನ ಪುತ್ರ ಕೃಷ್ಣ ಕಟಾಯತ್ ಏಕಾಏಕಿ ಕಾರಿನ ಮುಂದೆ ಬಂದಿದ್ದಾರೆ. ಈ ವೇಳೆ ಕಾರು ಮಗುವಿಗೆ ಗುದ್ದಿದೆ.
ಇದನ್ನೂ ಓದಿ : Mangaluru Couple arrested ganja case : ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ದಂಪತಿ ಬಂಧನ
ಮತ್ತೊಂದು ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ರಸ್ತೆ ಬದಿಯ ವಿದ್ಯುತ್ ಕಂಬವನ್ನು ಮುಟ್ಟಿದ ಮಗು ದಾರುಣವಾಗಿ ಉಸಿರು ಚೆಲ್ಲಿದೆ. ಮೃತ ಬಾಲಕನನ್ನು ಕೇರಳ ಮೂಲದ ರುಕ್ಕಾನ್ ಸೈಯದ್ ಎಂದು ಗುರುತಿಸಲಾಗಿದೆ.
ರಸ್ತೆ ಬದಿಯ ವಿದ್ಯುತ್ ಕಂಬವನ್ನು ಬಾಲಕ ಆಕಸ್ಮಿಕವಾಗಿ ಮುಟ್ಟಿದ್ದಾನೆ. ಆಗ ವಿದ್ಯುತ್ ಪ್ರವಹಿಸಿ ಬಾಲಕ ಮೃತ ಪಟ್ಟಿದ್ದಾನೆ. ಶರೀಫ್ ನಗರದಲ್ಲಿರುವ ತನ್ನ ಸಂಬಂಧಿಕರ ಮನೆ ಬಳಿ ಆಟವಾಡುತ್ತಿದ್ದ ಬಾಲಕ ರಸ್ತೆಯ ಬದಿಯ ವಿದ್ಯುತ್ ಕಂಬವನ್ನು ಮುಟ್ಟಿದ್ದಾನೆ. ಶನಿವಾರ ಸಂಜೆ 4 ಗಂಟೆಯ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ.
ಡಿಜಿಪಿ ಆದೇಶಕ್ಕೆ ಕಿಮ್ಮತಿಲ್ವ : ವಾಹನ ತಡೆಯಬೇಡಿ ಎರಡನೇ ಬಾರಿ ಆದೇಶ ಹೊರಡಿಸಿದ ಪ್ರವೀಣ್ ಸೂದ್
ಪೊಲೀಸ್ ಮುಖ್ಯಸ್ಥರೇ ಹೊರಡಿಸಿದ ಆದೇಶ ಜಾರಿಯಾಗೋದಿಲ್ಲ ಅಂದ್ರೆ ಪೊಲೀಸ್ ವ್ಯವಸ್ಥೆ ಹೇಗಿರಬಹುದು ಊಹಿಸಿ
ಬೆಂಗಳೂರು : ಸಂಚಾರ ಉಲ್ಲಂಘನೆ ನೆಪದಲ್ಲಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದಾಖಲೆ ಪರಿಶೀಲಿಸಿ ಜನರಿಗೆ ತೊಂದರೆ ಕೊಡಬೇಡಿ ಎಂದು ಸಾಕಷ್ಟು ವಾರಗಳ ಹಿಂದೆ ಡಿಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದರು. ಆದರೆ ಪೊಲೀಸ್ ಮಹಾನಿರ್ದೇಶಕರು ಹೊರಡಿಸಿದ್ದ ಆದೇಶ ಪಾಲನೆಯಾಗಿರಲಿಲ್ಲ. ಅವರೇನೂ ಕಚೇರಿಯಲ್ಲಿ ಕೂತು ಹೊರಡಿಸಿದ್ರು ಅಂತಾ ಬೀದಿಯಲ್ಲಿ ನಿಂತ ಪೊಲೀಸರು ವಾಹನಕ್ಕೆ ಕೈ ಹಾಕುವ ಕಾರ್ಯ ನಿಂತಿರಲಿಲ್ಲ.
ಇದೀಗ ಎರಡನೇ ಸಲ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಜನರಿಗೆ ತೊಂದರೆ ಕೊಡುವ ರೀತಿಯಲ್ಲಿ ವಾಹನಗಳನ್ನು ಅಡ್ಡಹಾಕಬೇಡಿ ಎಂದು ಮತ್ತೊಂದು ಆದೇಶ ಹೊರಡಿಸಿದ್ದಾರೆ. ಎರಡನೇ ಸಲದ ಆದೇಶದಲ್ಲಿ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನಗಳನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿರುವ ಬಗ್ಗೆ ಡಿಜಿಪಿಗೆ ದೂರುಗಳು ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಕಣ್ಣಿಗೆ ಕಾಣುವಂತೆ ಸಂಚಾರ ನಿಯಮ ಉಲ್ಲಂಘಣೆ ಕಂಡರೆ ಮಾತ್ರ ವಾಹನ ತಡೆಯಿರಿ ಎಂದು ಸೂಚಿಸಲಾಗಿತ್ತು. ಹಾಗಿದ್ದರೂ ಮರೆಯಲ್ಲಿ ನಿಂತು ವಾಹನ ನಿಲ್ಲಿಸುವ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದರು. ಇದೀಗ ಎರಡನೇ ಪೊಲೀಸ್ ಮಹಾನಿರ್ದೇಶಕರ ಎರಡನೇ ಆದೇಶಕ್ಕೆ ಕೆಳಹಂತದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಗೌರವ ಕೊಡ್ತಾರ ಕಾದು ನೋಡಬೇಕು.
Discussion about this post