ಚಿಕ್ಕಮಗಳೂರು : ಕುರಿ, ಕೋಳಿ, ವಿಸ್ಕಿ ,ಬಿಯರ್, ಖಾರದ ಪುಡಿ ಹೀಗೆ ವಿಭಿನ್ನ, ವಿಶಿಷ್ಟ, ವಿಚಿತ್ರ ಬಹುಮಾನಗಳ ಘೋಷಣೆಯೊಂದಿಗೆ ನಿಗದಿಯಾಗಿದ್ದ ಕ್ರಿಕೆಟ್ ಮ್ಯಾಚ್ ಸೈಲೆಂಟ್ ಆಗಿ ರದ್ದುಗೊಂಡಿದೆ.
ಖಾಂಡ್ಯ ಕ್ರಿಕೆಟ್ ಹಬ್ಬದ ಹೆಸರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರದ ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಫೆಬ್ರವರಿ 9 ರಂದು ದಿನಾಂಕ ಕೂಡಾ ನಿಗದಿಯಾಗಿತ್ತು.
ಆದರೆ ಕ್ರಿಕೆಟ್ ಮ್ಯಾಚ್ ಸುದ್ದಿಯಾಗಿದ್ದು ಘೋಷಿಸಿದ್ದ ಬಹುಮಾನಗಳ ಕಾರಣದಿಂದ. ಪ್ರಥಮ ಬಹುಮಾನ 30 ಕೆಜಿ ಕುರಿ, 1 ಬಾಟಲ್ ಎಂಸಿ ವಿಸ್ಕಿ, 1 ಕೇಸ್ ಬಿಯರ್, ದ್ವೀತಿಯ ಬಹುಮಾನವಾಗಿ 6 ನಾಟಿ ಕೋಳಿ, 1 ಬಾಟೆಲ್ ಬಿಪಿ ಮತ್ತು 1 ಕೇಸ್ ಬಿಯರ್.
ಜೊತಗೆ ಎಲ್ಲಾ ತಂಡಗಳಿಗೆ ಉಚಿತ 7up ಹಾಗೂ ಮ್ಯಾ ಆಪ್ ದಿ ಸೀರಿಸ್ ಗೆ 5 ಕೆಜಿ ಈರುಳ್ಳಿ, ಉತ್ತಮ ದಾಂಡಿಗನಿಗೆ 1 ಕೆಜಿ ಖಾರದ ಪುಡಿ, ಉತ್ತಮ ಎಸೆತಗಾರನಿಗೆ 2 ಲೀ ಸನ್ ಫ್ಲವರ್ ಆಯಿಲ್ ಘೋಷಿಸಲಾಗಿತ್ತು.
3 ಓವರ್ ನ ಈ ಪಂದ್ಯಕ್ಕೆ ಸಾವಿರ ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿತ್ತು. ಇನ್ನೇನು ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಅನ್ನುವಶ್ಟರಲ್ಲಿ ಪಂದ್ಯವೇ ರದ್ದುಗೊಂಡಿದೆ.
ಪಂದ್ಯ ರದ್ದುಗೊಳ್ಳಲು ಕಾರಣ ನಿಗೂಢವಾಗಿದೆ. ಒಟ್ಟಿನಲ್ಲಿ ಕುರಿ, ಕೋಳಿ ಎಣ್ಣೆ ಗೆಲ್ಲುವ ಆಸೆಯಲ್ಲಿದ್ದ ಕ್ರಿಕೆಟ್ ಕಲಿಗಳು ಈ ಸುದ್ದಿಯಿಂದ ನಿರಾಶೆಯಾಗಿದ್ದಾರೆ.
Discussion about this post