ಸಾವು ಯಾವಾಗ ಹೇಗೆ ಬರುತ್ತದೆ ಅನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ವಿಧಿಯಾಟ ಅನ್ನುವುದೇ ಹಾಗೇ chamarajanagar accident
ಚಾಮರಾಜನಗರ : ಕಾರು ಚಲಿಸುತ್ತಿದ್ದ ಸಂದರ್ಭದಲ್ಲೇ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ತಂದೆ ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ (chamarajanagar accident) ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪ ಹೆಗ್ಗವಾಡಿ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಹೊನ್ನೂರು ಗ್ರಾಮದ ಹೆಚ್.ಬಿ.ರಾಜು (49) ಹಾಗೂ ಶರತ್ (22) ಎಂದು ಗುರುತಿಸಲಾಗಿದೆ. ಯಳಂದೂರಿನಲ್ಲಿ ಅಂಗಡಿ ನಡೆಸುತ್ತಿದ್ದ ರಾಜಣ್ಣ ತಮ್ಮ ಪುತ್ರನೊಂದಿಗೆ ಕುದೇರು ರಸ್ತೆಯಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ (chamarajanagar accident) ಸಂಭವಿಸಿದೆ.
ಇದನ್ನೂ ಓದಿ : BIGG BOSS KANNADA : ಬಿಗ್ ಬಾಸ್ ಮನೆ ಪ್ರವೇಶಿಸಿದ ಪತ್ರಕರ್ತ ಸೋಮಣ್ಣ ಮಾಚಿಮಾಡ
ಆಲದ ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಒಳಗಿದ್ದ ಅಪ್ಪ ಮಗ ಇಬ್ಬರೂ ಅಪ್ಪಚ್ಚಿಯಾಗಿದ್ದಾರೆ. ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post