ಬೆಂಗಳೂರು : ಬ್ಯಾಡ್ ಟೈಮ್ ಎದುರಿಸುತ್ತಿರುವ ದರ್ಶನ್ ರಾಜಕೀಯಕ್ಕೆ ಬರ್ತಾರಂತೆ ಅನ್ನುವ ಸುದ್ದಿ ಇದೀಗ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಬೀಪ್ ಸೌಂಡ್ ಮೂಲಕ ಸದ್ದು ಮಾಡುವ ದರ್ಶನ್ ರಾಜಕೀಯಕ್ಕೆ ಬಂದ್ರೆ ಹೇಗಪ್ಪ ಎಂದು ಕೆಲವರು ಯೋಚಿಸಿದ್ರೆ, ನಮ್ಮ ಬಾಸ್ ರಾಜಕೀಯಕ್ಕೆ ಬರಬೇಕು, ಬಂದೇ ಬರ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಹಾಗಾದ್ರೆ ಈ ಸುದ್ದಿ ಎಲ್ಲಿಂದ ಬಂತಪ್ಪ ಎಂದು ಹುಡುಕಾಟ ನಡೆಸಿದ್ರೆ ಇದು ಮಚ್ಚೆ ಹಾಗೂ ಸಂಖ್ಯೆ ಖ್ಯಾತಿಯ ಜ್ಯೋತಿಷಿಯೊಬ್ಬರು ಹೇಳಿದ ಭವಿಷ್ಯ. ಅದ್ಯಾವುದೋ ಮಾಧ್ಯಮದ ಜೊತೆ ಮಾತನಾಡಿದ್ದ ಜ್ಯೋತಿಷಿ ಈಗ ದರ್ಶನ್ ಟೈಮ್ ಸರಿ ಇಲ್ಲ ಎಂದು ಅದ್ಯಾವುದೋ ಗ್ರಹಗಳ ಲೆಕ್ಕ ಹೇಳಿದ್ದಾರೆ.
ಹಾಗಂತ ಅವರು ಗಾಬರಿಯಾಗುವ ಅಗತ್ಯವಿಲ್ಲ, ಇನ್ನು ಕೆಲವೇ ತಿಂಗಳಲ್ಲಿ ಅವರ ಜಾತಕ ಸೂಪರ್ ಆಗಿರುತ್ತದೆ. ಹಾಗಿದ್ದರೂ ಅವರಿಗೆ ಕಷ್ಟ ತಪ್ಪಿದ್ದಲ್ಲ. ಎಲ್ಲವನ್ನೂ ಒಂಟಿ ಸಲಗದಂತೆ ಎದುರಿಸುತ್ತಾರೆ, ಜೊತೆಗೆ ರಾಜಕೀಯಕ್ಕೂ ಬರ್ತಾರೆ. ಆದರೆ ಈಗಲ್ಲ. ಮುಂದಿನ ದಿನದಲ್ಲಿ ಅವರು ರಾಜಕೀಯಕ್ಕೆ ಬಂದರೂ ಬರಬಹುದು ಎಂದು ಭವಿಷ್ಯ ಹೇಳಿದ್ದಾರೆ.
ಇನ್ನು ಯಡಿಯೂರಪ್ಪ ಹಾಗೂ ದರ್ಶನ್ ಜಾತಕ ಒಂದೇ ರೀತಿ ಇದೆ. ಈಗ ಯಡಿಯೂರಪ್ಪ ಕೂಡಾ ಸಂಕಷ್ಟದಲ್ಲಿದ್ದಾರೆ, ದರ್ಶನ್ ಕೂಡಾ ಸಂಕಷ್ಟದಲ್ಲಿದ್ದಾರೆ ಅಂದಿರುವ ಜ್ಯೋತಿಷಿ ದರ್ಶನ್ ಅವರದ್ದು ಮಕರ ರಾಶಿ, ಮುಂದಿನ ದಿನಗಳಲ್ಲಿ ಅವರ ಸಿನಿಮಾ ಸೂಪರ್ ಹಿಟ್ ಆಗಲಿದೆ ಅಂದಿದ್ದಾರೆ.
ಜೊತೆಗೆ ಇದೇ ಜ್ಯೋತಿಶಷಿ ನಾನು ಹಾಗೂ ದರ್ಶನ್ ಒಂದೇ ವರ್ಷದಲ್ಲಿ ಹುಟ್ಟಿದ್ದು ಎಂದು ಹೇಳುವ ಮೂಲಕ ವೈರಲ್ ಆಗಿದ್ದಾರೆ. ಅಂದ ಹಾಗೇ ಇದೇ ಜ್ಯೋತಿಷಿ ಹಿಂದೊಮ್ಮೆ ಲಕ್ಷ್ಮಿ ಅನ್ನೋ ಹೆಸರೇ ದರಿದ್ರ ಎಂದು ಹೇಳಿ, ದರ್ಶನ್ ಅಭಿಮಾನಿಗಳಿಂದಲೇ ಛೀ..ಥೂ ಎಂದು ಉಗಿಸಿಕೊಂಡಿದ್ದರು.
Discussion about this post