ಬಿಹಾರ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸುವ ವೇಳೆ ರಾಷ್ಟ್ರ ಧ್ವಜವನ್ನು ಅವಮಾನಿಸಿದ ಆರೋಪದಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ಪ್ರಕರಣ ದಾಖಲಾಗಿದೆ. ಆಗಸ್ಟ್ 22ರಂದು ಲಖನೌದಲ್ಲಿ ಈ ಘಟನೆ ನಡೆದಿತ್ತು.
ಅಂತ್ಯಕ್ರಿಯೆಗೂ ಮುನ್ನ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ಧ್ವಜವನ್ನು ಇಟ್ಟಿರುವುದೇ ಈ ವಿವಾದಕ್ಕೆ ಕಾರಣ. ಈ ಸಂಬಂಧ ಸಿಕಂದರ್ಪುರ ಮೂಲದ ಚಂದ್ರ ಕಿಶೋರ್ ಪರಾಶರ್ ಮುಜಾಫರ್ಪುರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಮ್ಮ ಅರ್ಜಿಗೆ ಪೂರಕವಾಗಿ ಕೆಲವು ಚಿತ್ರಗಳನ್ನು ಸಹ ಪರಾಶರ್ ಸಲ್ಲಿಸಿದ್ದು, ಇದೊಂದು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ ಅಂದಿದ್ದಾರೆ.
Discussion about this post