ನವದೆಹಲಿ : ಸೋಮವಾರವಷ್ಟೇ ಬಿಡುಗಡೆಯಾಗಿರುವ BMW IX ಕಾರು ಮೊದಲ ದಿನವೇ Sold out ಆಗಿದೆ. ಈ ಸಂಬಂಧ ಕಂಪನಿಯೇ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಪೂರ್ಣ ವಿದ್ಯುತ್ ಚಾಲಿತ SAV ವಾಹನ ಬಿಡುಗಡೆ ಮಾಡಿದ ಮೊದಲ ದಿನವೇ ಬುಕ್ಕಿಂಗ್ ಆಗಿದೆ ಅಂದಿದೆ.
ಮೊದಲ ದಿನ ಮೊದಲ ಹಂತದಲ್ಲೇ ಲಭ್ಯವಿದ್ದ ಎಲ್ಲಾ ಕಾರುಗಳನ್ನು ಬುಕ್ಕಿಂಗ್ ಮಾಡಲಾಗಿದ್ದು, ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
2022ರ ಏಪ್ರಿಲ್ ತಿಂಗಳಿನಿಂದ ಕಾರಿನ ವಿತರಣೆ ಪ್ರಾರಂಭವಾಗಲಿದೆ. ಹೀಗಾಗಿ 2002ರ ಮಾರ್ಚ್ ಹೊತ್ತಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭವಾಗಲಿದೆ. ಅಂದ ಹಾಗೇ ಈ ಕಾರಿನ ಬೆಲೆ 1.16 ಕೋಟಿ ರೂಪಾಯಿ
ವಿಮಾನ ನಿಲ್ದಾಣದಲ್ಲಿ ಬೋನಿನಿಂದ ತಪ್ಪಿಸಿಕೊಂಡ 2 ಸಿಂಹಗಳು…!
ಸಿಂಗಾಪುರ : ವಿದೇಶದ ಮೃಗಾಲಯವೊಂದಕ್ಕೆ ಸಾಗಿಸಲು ಒಟ್ಟು 7 ಸಿಂಹಗಳನ್ನು ಬೋನಿನಲ್ಲಿ ಹಾಕಿ ಸಿಂಗಾಪುರದ ವಿಮಾನ ನಿಲ್ದಾಣವೊಂದಕ್ಕೆ ತರಲಾಗಿತ್ತು. ಸಿಂಗಾಪುರ್ ಎರ್ ಲೈನ್ಸ್ ಮೂಲಕ ಇದನ್ನು ಸಾಗಿಸುವುದು ಯೋಜನೆ.
ಆದರೆ ಹೀಗೆ ಸಾಗಿಸಲು ಕಂಟೈನರ್ ನಲ್ಲಿ ಇರಿಸಲಾಗಿದ್ದ 2 ಸಿಂಹಗಳು ಚಾಂಗಿ ವಿಮಾನನಿಲ್ದಾಣದಲ್ಲಿ ತಪ್ಪಿಸಿಕೊಂಡಿದೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಮಾಂಡೈ ವನ್ಯಜೀವಿ ತಜ್ಞರನ್ನು ಕರೆಸಿ ಅರಿವಳಿಕೆ ಮದ್ದು ನೀಡುವ ಮೂಲಕ ಸಿಂಹಗಳನ್ನು ಸೆರೆ ಹಿಡಿಯಲಾಗಿದೆ.
ಇದಾದ ಬಳಿಕ 5 ಸಿಂಹಗಳು ವಿದೇಶಕ್ಕೆ ಪ್ರಯಾಣ ಬೆಳೆಸಿದ್ರೆ, ಎರಡು ಸಿಂಹಗಳನ್ನು ಮೈಂಡೈ ಅಭಯಾರಣ್ಯದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Discussion about this post