ಬೆಂಗಳೂರು : ಈಗಾಗಲೇ ಕಾರು ಮತ್ತು ಬೈಕ್ ವಿಭಾಗದಲ್ಲಿ ತನ್ನ ಉತ್ಪನ್ನಗಳನ್ನು ಪರಿಚಯಿಸಿರುವ ಜರ್ಮನಿಯ ವಾಹನ ತಯಾರಕ ಬಿಎಂಡಬ್ಲ್ಯು ಮೋಟರ್ರಾಡ್ (BMW Motorrad) ಇದೀಗ ಹೊಸ ಎಲೆಕ್ಟ್ರಿಕ್ ಸ್ಕೂಟರ್ C400GT ಅನ್ನು ಪರಿಚಯಿಸಿದೆ. ಈ ಮೂಲಕ ಸ್ಕೂಟರ್ ಕ್ಷೇತ್ರಕ್ಕೂ ಕಾಲಿಟ್ಟಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊದಲ ಬಾರಿಗೆ 2017 ರಲ್ಲಿ ಬಿಎಂಡಬ್ಲ್ಯು ಮೋಟರ್ರಾಡ್ ಕಾನ್ಸೆಪ್ಟ್ ಲಿಂಕ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇದಾದ ಕೆಲವೇ ವರ್ಷಗಳಲ್ಲಿ ಈ ಸ್ಕೂಟರ್ ವಿವಿಧ ದೇಶಗಳಲ್ಲಿ ಬಿಡುಗಡೆಗೊಂಡಿದೆ. ಇಂದು ಈ ಬಿಎಂಡಬ್ಲ್ಯು C400GT ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಾಗಿದೆ.
BMW C400GT ಸ್ಕೂಟರ್ 10.25 ಇಂಚಿನ ಬಣ್ಣದ ಟಿಎಫ್ಟಿ ಡಿಸ್ಪ್ಲೇ ಹೊಂದಿದ್ದು, ಇದರಲ್ಲಿ ಗೂಗಲ್ ಮ್ಯಾಪ್ ಸೇರಿದಂತೆ ಸ್ಮಾರ್ಟ್ಫೋನ್ ಸಂಪರ್ಕದ ವ್ಯವಸ್ಥೆಗಳಿದೆ. ( ಬೆಂಗಳೂರು ಪೊಲೀಸರ ಇತ್ತೀಚಿನ ನಿಯಮದ ಪ್ರಕಾರ ಈ ಬೈಕ್ ಸವಾರರಿಗೆ ಕೇಸ್ ಗ್ಯಾರಂಟಿ)
ಗಂಟೆಗೆ 139 ಕಿಲೋಮೀಟರ್ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಈ ಸ್ಕೂಟರ್ ಹೊಂದಿದ್ದು, ಈ ಸ್ಕೂಟರ್ 9.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ಗಂಟೆ 20 ನಿಮಿಷ ಬೇಕಾಗುತ್ತದೆ.
ಈ ಐಷಾರಾಮಿ ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಕೂಡಾ ವಿಶೇಷವಾಗಿದ್ದು ಮುಂಭಾಗದಲ್ಲಿ ಡಬಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಸಿಸ್ಟಂ ಅನ್ನು ಒಳಗೊಂಡಿದೆ. ಹೆಚ್ಚಿನ ಸುರಕ್ಷತೆಗಾಗಿ ಸಿಬಿಎಸ್ ಸಿಸ್ಟಂ ಅನ್ನು ಕೂಡಾ ಅಳವಡಿಸಲಾಗಿದೆ. ಅಂದ ಹಾಗೇ ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಬೆಲೆಯು ರೂ.9,95,000 ಆಗಿದೆ. ಇದು ex-showroom ಬೆಲೆ.
ಬೈಕ್ ನ ಕೆಲ ವಿಶೇಷತೆಗಳು ಹೀಗಿದೆ.
– Directly imported CBU scooter
– Twin LED headlight with DRLs
– Keyless Ride
– Powered by a 350cc, single-cyl, water cooled engine
– Produces 34 HP at 7500 RPM
– 35 Nm at 5750 RPM
– Does 0-100 km/hr in 9.5 seconds
– Top speed is 139 km/hr
– 15-inch tyre at the front & 14-inch rear tyre
– Twin disc brakes at the front and single disc rear
– 6.5-inch full-colour TFT screen
– BMW Motorrad Connectivity App with navigation
Discussion about this post