ಕೊರೋನಾ ಸೋಂಕಿನ ಬೆನ್ನಲ್ಲೇ ಭಾರತದಲ್ಲಿ ಮಂಕಿ ಪಾಕ್ಸ್ ಸೇರಿದಂತೆ ಅಪರೂಪದ ರೋಗಗಳು ಕಾಡಲಾರಂಭಿಸಿದೆ. ಜೊತೆಗೆ ಡೆಂಘೀ ಮಲೇರಿಯಾ ಕೂಡಾ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಕಪ್ಪು ಜ್ವರದ ( black fever – kala-azar )ಕಾಟ ಶುರುವಾಗಿದೆ.
ಕೊಲ್ಕತ್ತಾ : ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಪಶ್ಚಿಮ ಬಂಗಾಳ ಸರ್ಕಾರ ಇದೀಗ ಮತ್ತೊಂದು ರೋಗವನ್ನು ನಿಯಂತ್ರಿಸಬೇಕಾದ ಒತ್ತಡದಲ್ಲಿದೆ. ಕಳೆದ ಎರಡು ವಾರಗಳಲ್ಲಿ ಪಶ್ಚಿಮ ಬಂಗಾಳದ 11 ಜಿಲ್ಲೆಗಳಲ್ಲಿ ಕಪ್ಪು ಜ್ವರ ಅಥವಾ ಕಾಲಾ ಅಜರ್ ( black fever – kala-azar ) ವ್ಯಾಪಕವಾಗಿ ಹರಡುತ್ತಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನೇ ಈ ರೋಗ ಟಾರ್ಗೇಟ್ ಮಾಡಿರುವುದು ತಲೆ ನೋವು ಹುಟ್ಟಿಸಿದೆ. ಅಧ್ಯಯನದ ಪ್ರಕಾರ ಬಡ ವರ್ಗದ ಮಂದಿಗೆ ಈ ರೋಗ ಬೇಗ ಹರಡುತ್ತದೆ. ಬಡವರು ಅನ್ನುವ ಕಾರಣಕ್ಕೆ ಜ್ವರ ಕಾಣಿಸಿಕೊಳ್ಳುವುದಿಲ್ಲ. ಬಡವರಲ್ಲಿ ಅಪೌಷ್ಟಿಕತೆ ಕೊರತೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.
11 ಜಿಲ್ಲೆಗಳಲ್ಲಿ 65 ಜನರಿಗೆ ಈ ಜ್ವರ ಬಂದಿರುವುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ. ರಾಜ್ಯ ಆರೋಗ್ಯ ಇಲಾಖೆ ಕೂಡಾ ಈ ರೋಗ ನಿಯಂತ್ರಣಕ್ಕೆ ಪಣ ತೊಟ್ಟಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಇದನ್ನೂ ಓದಿ : Urfi Javed -ನಮ್ಮ ಕಣ್ಣುಗಳನ್ನು ದಾನ ಮಾಡಲು ರೆಡಿಯಾಗಿದ್ದೇವೆ : ಉರ್ಫಿಯ ಹೊಸ ಅವತಾರ ಕಂಡವರ ಮಾತು
ಏನಿದು ಕಪ್ಪು ಜ್ವರ
ಇದು ನೊಣಗಳ ಕಡಿತದಿಂದ ಹರಡುವ ರೋಗವಾಗಿದ್ದು, ಅನಿಯಮಿತ ಜ್ವರ, ತೂಕ ಇಳಿಕೆ, ಯಕೃತಿನ ಹಿಗ್ಗುವಿಕೆ, ರಕ್ತ ಹೀನತೆ ಈ ರೋಗದ ಪ್ರಮುಖ ಲಕ್ಷಣ. ಈ ಜ್ವರಕ್ಕೆ ಚಿಕಿತ್ಸೆ ನೀಡದೇ ಹೋದ್ರೆ ಮಾರಣಾಂತಿಕವಾಗುತ್ತದೆ. ಸರಿಯಾದ ಸಮಯಕ್ಕೆ ಟ್ರೀಟ್ ಮೆಂಟ್ ಕೊಟ್ರೆ ರೋಗಿಯನ್ನು ಉಳಿಸಿಕೊಳ್ಳಬಹುದಾಗಿದೆ.
ಬ್ರೆಜಿಲ್, ಪೂರ್ವ ಆಫ್ರಿಕಾ ಬಿಟ್ಟರೆ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಜ್ವರ ಕಾಣಿಸಿಕೊಂಡಿದೆ. ಡಾರ್ಜಿಲಿಂಗ್, ಮಾಲ್ಡಾ, ಉತ್ತರ ದಿನಾಜ್ ಫುರ್, ಕಾಲಿಂಪಂಗ್ ಜಿಲ್ಲೆಗಳಲ್ಲಿ ಈ ಹಿಂದೆ ಈ ಜ್ವರ ಕಾಣಿಸಿಕೊಂಡಿತ್ತು. ಇದೀಗ ಮೊದಲ ಪಶ್ಚಿಮಬಂಗಾಳದಲ್ಲಿ ಈ ಜ್ವರ ಕಾಣಿಸಿಕೊಂಡಿದೆ.
ಸಿಎಂ ಮನೆ ಮುಂದೆ ರಸ್ತೆಗೆ 29 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ : ಇದು ಕಾಮನ್ ಮ್ಯಾನ್ ಸಿಎಂ ಕಾರ್ಯವೈಖರಿ
ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದು ಎಕ್ಕುಟ್ಟು ಹೋಗಿದೆ. ಅದೆಷ್ಟೋ ಜನರು ಇದೇ ಗುಂಡಿಯ ಕಾರಣದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆ ಗುಂಡಿ ಮುಚ್ಚುವ ಬದಲು ತಮ್ಮ ಮನೆ ಮುಂದೆ ರಸ್ತೆಗೆ ವೈಟ್ ಟಾಪಿಂಗ್ ಮಾಡಿಸಲು ಸಿಎಂ ಬಸವರಾಜ್ ಬೊಮ್ಮಾಯಿ ಮುಂದಾಗಿದ್ದಾರೆ
ಬೆಂಗಳೂರು : ರಾಜಧಾನಿಯ ರಸ್ತೆಗಳು ಎಲ್ಲಿಂದ ಎಂದು ಹುಡುಕಬೇಕಾಗಿದೆ. ಬಿಬಿಎಂಪಿ ಮಾಡಿದ ಕಳಪೆ ಕಾಮಗಾರಿ ಕಾರಣದಿಂದ ಗುಂಡಿಗಳು ಬಿದ್ದು, ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡೇ ಡ್ರೈವ್ ಮಾಡಬೇಕಾಗಿದೆ. ಗುಂಡಿ ಮುಚ್ಚುವ ವಿಚಾರದಲ್ಲಿ ಸರ್ಕಾರ ಕಥೆ ಹೇಳುತ್ತಿದೆ ಬಿಟ್ರೆ, ಅದಕ್ಕೊಂದು ಶಾಶ್ವತ ಪರಿಹಾರದ ಬಗ್ಗೆ ಈವರೆಗೆ ಬಂದ ಅದ್ಯಾವ ಸರ್ಕಾರಗಳು ತಲೆ ಕೆಡಿಸಿಕೊಂಡಿಲ್ಲ. ಇದಕ್ಕೆ ಬೊಮ್ಮಾಯಿ ಸರ್ಕಾರವೂ ಹೊರತಲ್ಲ.
ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಿಸುವ ಬದಲು ತಮ್ಮ ಮನೆ ಮುಂದಿನ ರಸ್ತೆಗೆ 29 ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಿಸಲು ಮುಂದಾಗಿದ್ದಾರೆ. ಈ ಸಂಬಂಧ ಬಿಬಿಎಂಪಿ ಟೆಂಡರ್ ಕೂಡಾ ಕರೆದಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಬಾರದಂತೆ ಶಾಶ್ವತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ಖಾಸಗಿ ಟಿವಿ ವಾಹಿನಿಯೊಂದಕ್ಕೆ ಸಮರ್ಥನೆ ಬೇರೆ ಕೊಟ್ಟಿದ್ದಾರೆ.
ಇನ್ನು ಸಿಎಂ ಮನೆ ಇರುವ 4.6 ಕಿಮೀ ಉದ್ಧದ ಈ ತರಳಬಾಳು ರಸ್ತೆಗೆ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ಬಳಿ ಎರಡೆರಡು ಬಾರಿ ಕಾಮಗಾರಿ ಕೈಗಳ್ಳಲಾಗಿದೆ. ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಇದೆಷ್ಟು ಸಲ ಬಿಬಿಎಂಪಿ ಡಾಂಬರು ಸುರಿದಿದೆಯೋ ಗೊತ್ತಿಲ್ಲ.
ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಂತೆ ರಾತ್ರೋರಾತ್ರಿ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿತ್ತು. ಟ್ರಾಫಿಕ್ ಮಾರ್ಕಿಂಗ್, ಫುಟ್ ಪಾತ್ ಅಭಿವೃದ್ಧಿ ನಡೆಸಲಾಗಿತ್ತು. ಮೂರು ತಿಂಗಳ ಹಿಂದೆ ಮತ್ತೆ ಡಾಂಬರೀಕರಣ ನಡೆದಿತ್ತು. ಹಾಗೇ ನೋಡಿದರೆ ಈ ತರಳಬಾಳು ರಸ್ತೆ ಚೆನ್ನಾಗಿದೆ. ಒಂದೇ ಒಂದು ಗುಂಡಿಯೂ ಇಲ್ಲ ಹಾಗಿದ್ದ ಮೇಲೆ 29 ಕೋಟಿ ರೂಪಾಯಿ ಸುರಿಯುವ ಅಗತ್ಯವೇನಿದೆ, ಮುಖ್ಯಮಂತ್ರಿಗಳೇ ಉತ್ತರಿಸಬೇಕು.
Discussion about this post