ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿದ್ದ ಚೈತ್ರಾ ಕೊಟ್ಟೂರು ಸುದ್ದಿಯಾಗಿದ್ದು, ಹರಿಪ್ರಿಯಾ ನಟನೆ ಸೂಜಿ ದಾರ ಸಿನಿಮಾದ ವಿವಾದ ಮೂಲಕ.
ಬಿಗ್ ಬಾಸ್ ಮನೆಗೆ ಬಂದ ಮೇಲೆ ವೀಕ್ಷಕರ ಪಾಲಿಗೆ ಅನಾಸಿನ್ ಆಗಿದ್ದ ಚೈತ್ರಾ ಕೊಟ್ಟೂರು, ಶೈನ್ ಶೆಟ್ಟಿ ಹಿಂದೆ ಬಿದ್ದಿದ್ದರು. ಎಲ್ಲಿಯ ತನಕ ಅಂದ್ರೆ ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಓಡಿ ಹೋಗಲು ಸಿದ್ದವಾಗಿದ್ದರು. ಆದರೆ ಅವೆಲ್ಲವೂ ಪಾರ್ಟ್ ಆಫ್ ರಿಯಾಲಿಟಿ ಶೋ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ತನ್ನಿಷ್ಟದ ಕೆಲಸದಲ್ಲಿ ಚೈತ್ರಾ ಕೊಟ್ಟೂರು ತೊಡಗಿಸಿಕೊಂಡಿದ್ದರು.
ಇದೀಗ ಅದೇ ಚೈತ್ರಾ ಕೊಟ್ಟೂರು ಗೃಹಸ್ಥಾಶ್ರಮ ಪ್ರವೇಶಿದ್ದಾರೆ. ಸದ್ದಿಲ್ಲದೆ ಮದುವೆ ಮಾಡಿಕೊಂಡಿರುವ ಸಿಕ್ಕಾಪಟ್ಟೆ ಸರಳವಾಗಿ ಗೃಹಿಣಿ ಪಟ್ಟ ಅಲಂಕರಿಸಿದ್ದಾರೆ.
ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ನೆರವೇರಿದೆ. ಅಂದ ಹಾಗೇ ಚೈತ್ರಾ ಕೈ ಹಿಡಿದವರು ನಾಗಾರ್ಜುನ್.
ಚೈತ್ರಾ ಮತ್ತು ನಾಗಾರ್ಜುನ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು ಎಂದು ಮೂಲಗಳು ಹೇಳಿವೆ.
ಬಿಗ್ ಬಾಸ್ ಮನೆಯ ಸದಸ್ಯರನ್ನೂ ಕರೆಯದೇ ಕೊಟ್ಟೂರು ತಾಳಿ ಕಟ್ಟಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಹಲವು ತಿಂಗಳ ಹಿಂದೆಯೇ ಚೈತ್ರಾ ಕೊಟ್ಟೂರು ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವುದು ಗೊತ್ತಾಗಿತ್ತು.
Discussion about this post