ಬಿಗ್ ಬಾಸ್ ಸೀಸನ್ 8ಕ್ಕೆ ತೆರೆ ಬೀಳಲು ಇನ್ನು ಕೆಲವೇ ದಿನಗಳು ಬಾಕಿ. ಎರಡನೇ ಇನ್ನಿಂಗ್ಸ್ ಅನ್ನು ನಿಗದಿತ ಅವಧಿಕ್ಕಿಂತ ಒಂದಿಷ್ಟು ದಿನ ವಿಸ್ತರಿಸಲಾಗಿದ್ದು, ಆಗಸ್ಟ್ 8ಕ್ಕೆ ಫೈನಲ್ ನಡೆಯಲಿದೆ. ಹೀಗಾಗಿ ಇನ್ನು 14 ರಿಂದ 15 ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.
ಈಗಿರುವ ಪ್ಲಾನ್ ಪ್ರಕಾರ ಆಗಸ್ಟ್ 7 ಹಾಗೂ ಆಗಸ್ಟ್ 8 ರಂದು ಫೈನಲ್ ಕಾರ್ಯಕ್ರಮ ಪ್ರಸಾರವಾಗಲಿದೆ. ಆಗಸ್ಟ್ 8 ರಂದು ಬಿಗ್ ಬಾಸ್ ಸೀಸನ್ 8ರ ವಿಜೇತನನ್ನು ಸುದೀಪ್ ಅವರು ಘೋಷಿಸಲಿದ್ದಾರೆ. ಇನ್ನು ಕೊರೋನಾ ಕಾರಣದಿಂದ ಫೈನಲ್ ಕಾರ್ಯಕ್ರಮ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಜೊತೆಗೆ ಸ್ಪರ್ಧಿಗಳ ಕುಟುಂಬದಿಂದ ಸೀಮಿತ ಅಹ್ವಾನಿತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
![bigg boss2](https://torrentspree.com/wp-content/uploads/2021/04/bigg-boss2.jpg)
ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಹೋದ ಸ್ಪರ್ಧಿಗಳು ಮುಂದಿನ ದಿನಗಳಲ್ಲಿ ಹೊಸ ಅವಕಾಶದ ನಿರೀಕ್ಷೆಯಲ್ಲಿದ್ದರು. ಆದರೆ ಕೊರೋನಾ ಕಾರಣದಿಂದ ಚಂದನವನ ಮೌನಕ್ಕೆ ಶರಣಾಗಿದೆ. ಹೀಗಾಗಿ ಅವರಿಗೆ ಅವಕಾಶದ ಕೊರತೆಯೂ ಕಾಡಲಿದೆ.
ಇನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವೈಷ್ಣವಿ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ ಅವರದ್ದು ಎಂತ ಮನಸ್ಥಿತಿ ಅನ್ನುವುದು ಬಯಲಾಗಿದೆ. ವೈಷ್ಣವಿ ಕೂಲ್ ಆಗಿ ಕಾಣಿಸಿದ್ರು, ಅವೆಲ್ಲವೂ ಕ್ಯಾಮಾರ ಮುಂದೆ ಮಾತ್ರ, ಚಂದ್ರಚೂಡ ಮಾನ ಮರ್ಯಾದೆ ಕಳೆದುಕೊಳ್ಳಲೆಂದೇ ಬಿಗ್ ಬಾಸ್ ಮನೆಗೆ ಹೋಗಿದ್ದರು. ಸಂಬರಗಿ ಅಬ್ಬರಿಸಿ ಬೊಬ್ಬಿರಿಸುವ ವ್ಯಕ್ತಿಯಾದರೂ ಅವರಲ್ಲಿ ಮಗುವಿನ ಮನಸ್ಸಿದೆ ಅನ್ನುವುದು ಗೊತ್ತಾಗಿದೆ.
![sudeep bbk8](https://torrentspree.com/wp-content/uploads/2021/04/sudeep-bbk8.png)
Discussion about this post