ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಇತರ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ಕಿರಿ ಕಿರಿ ಉಂಟು ಮಾಡಿದ್ದ ಆ್ಯಂಡಿ ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಮೇಲೂ ಬದಲಾದ ಹಾಗಿಲ್ಲ.
ಒಂದು ವೇಳೆ ಬದಲಾಗಿದ್ದರೆ ಇವತ್ತು ಕವಿತಾ ಮಹಿಳಾ ಆಯೋಗದ ಮೆಟ್ಟಿಲು ಹತ್ತುವ ಅಗತ್ಯ ಬರುತ್ತಿರಲಿಲ್ಲ. ಈ ನಡುವೆ ಕವಿತಾ ಮಹಿಳಾ ಆಯೋಗದಲ್ಲಿ ದೂರು ದಾಖಲಿಸುತ್ತಿದ್ದಂತೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಆ್ಯಂಡಿ ಕಾರ್ಯಕ್ರಮ ಮುಗಿದ ಮೇಲೆ ಕವಿತಾರನ್ನ ಭೇಟಿಯಾಗಿಲ್ಲ, ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ. ಅವರಿಗೆ ಮೆಸೇಜ್ ಮಾಡಿಲ್ಲ ಅಂದಿದ್ದಾರೆ.
ಬಿಗ್ ಬಾಸ್ ಮನೆಯ ಪಾರ್ಟಿಯಲ್ಲಿ ನೀನು ಮಾಡಿದನ್ನು ನಾನು ಮರೆಯೋದಿಲ್ಲ. ನಿನಗೆ ಮುಂದೆ ಇಟ್ಟಿದ್ದೀನಿ ಎಂದು ನನಗೆ ಒಪನ್ ವಾರ್ನಿಂಗ್ ಮಾಡಿದ್ದರು ಅಂದಿರುವ ಆ್ಯಂಡಿ ಅದಾದ ಬಳಿಕ ನಾನು ಅವರ ಜೊತೆ ಮಾತನಾಡಿಲ್ಲ. ಇದು ಪಬ್ಲಿಸಿಟಿ ಸ್ಟಂಟಾ? ಎಂದು ಹೇಳಬೇಕಾ ಬೇಡ್ವಾ ಎಂದು ಗೊತ್ತಾಗುತ್ತಿಲ್ಲ ಅಂದಿದ್ದಾರೆ.
ಭೇಷ್ ಕವಿತಾ :ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ ವಿರುದ್ಧ ಕಾನೂನು ಹೋರಾಟ ಶುರುವಿಟ್ಟ ಚಿನ್ನು
ನಾನು ಅವರಿಗೆ ಕಿರಿಕಿರಿ ಮಾಡಿದರೆ ಅದು ಕೇವಲ ಟಾಸ್ಕ್. ಬಿಗ್ ಬಾಸ್ ಮನೆಯಲ್ಲಿ ಅದನ್ನು ಎಲ್ಲರೂ ಮಾಡ್ತಾರೆ. ಕಾರ್ಯಕ್ರಮ ಮುಗಿಸಿ ಹೊರ ಬಂದ ಮೇಲೆ ನಾನು ಅವರಿಗೆ ಕಿರಿಕಿರಿ ಮಾಡಿಲ್ಲ. ನಾನು ಅವರ ವಿರುದ್ಧ ಪ್ರತಿ ದೂರು ಕೊಡುವುದಿಲ್ಲ. ಕವಿತಾ ಮಾಡಿರುವ ಆರೋಪಗಳೆಲ್ಲವೂ ಸುಳ್ಳಾಗಿದ್ದು, ಅವರಿಗೆ ತೊಂದರೆ ಆದಾಗ ಅಲ್ಲೇ ಯಾಕೆ ಹೇಳಿಲ್ಲ. 20 ದಿನದ ನಂತರ ನೆನಪಾಯಿತಾ ಎಂದು ಆ್ಯಂಡಿ ಪ್ರಶ್ನೆ ಮಾಡಿದ್ದಾರೆ.
ನಾನು ಈಗ ಸಿನಿಮಾಗಳಲ್ಲಿ ಛಾನ್ಸ್ ಪಡೆದು ಕೆರಿಯರ್ ಶುರು ಮಾಡಬೇಕು ಆಂದುಕೊಂಡಿದ್ದೆ. ಅವರು ಇವನನ್ನು ಬೆಳೆಯಲು ಬಿಡಬಾರದು ತುಳಿದು ಸಾಯಿಸಬೇಕು ಅಂದುಕೊಂಡಿರುವಂತಿದೆ.ನಾನು ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ಪಾಠಗಳನ್ನು ಕಲಿತ್ತಿದ್ದೇನೆ. ನಾನು ಇನ್ಮುಂದೆ ಜೀವನದಲ್ಲಿ ಹೀಗೆ ಇರಲ್ಲ, ನಾನು ಬದಲಾಗಿದ್ದೇನೆ ಎಂದು ಹೇಳಿ ಬಂದೆ. ಆದರೆ ಇವರು ಬಿಡಲ್ಲ. ನನ್ನನ್ನು ಸಾಯಿಸುತ್ತಿದ್ದಾರೆ ಅಂದಿದ್ದಾರೆ.
ಈತನ ಮಾತುಗಳನ್ನು ಕೇಳಿದರೆ ಯಾವುದು ಕೂಡಾ ನೈಜತೆಯ ಮಾತುಗಳು ಎಂದು ಅನ್ನಿಸುತ್ತಿಲ್ಲ.
Discussion about this post