ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಥಮ್ :ಒಳ್ಳೆ ಹುಡುಗನ ಕಂಡು ಮಾಜಿ ಪಿಎಂ ಹೇಳಿದ್ದೇನು..?

ಕನ್ನಡ ಕಿರುತೆರೆಯ ಮಹಾಮನೆಯಲ್ಲಿ ಕ್ರಾಂತಿ ಎಬ್ಬಿಸಿ ಬಂದ ಒಳ್ಳೆ ಹುಡುಗ, ಸ್ವಯಂ ಘೋಷಿತ ಕರ್ನಾಟಕದ ಆಸ್ತಿ ಪ್ರಥಮ್ ಇದೀಗ ರಾಜಕಾರಣಿಗಳ ಸುತ್ತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬ್ಯುಸಿಯ ನಡುವೆಯೂ ಪ್ರಥಮ್ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದಿದ್ದಾರೆ.

ದೆಹಲಿಯಿಂದ ಶುಕ್ರವಾರವಷ್ಟೇ ವಾಪಾಸ್ಸಾಗಿದ್ದ ದೇವೇಗೌಡರಿಗೆ ಶನಿವಾರ ಸ್ನಾಯು ಸೆಳೆತ ಉಂಟಾಗಿ ಕಾಲು ನೋವು ಕಾಣಿಸಿಕೊಂಡಿತ್ತು. ಶನಿವಾರ ಬೆಳಗ್ಗೆ ಕೊಠಡಿ ಬಳಿ ದೇವೇಗೌಡರು ವೇಳೆ ಕಾಲು ಎಡವಿದ್ದರಿಂದ ಅವರ ಕಾಲಿಗೆ ಏಟಾಗಿತ್ತು. ಇದರಿಂದ ಕಾಲು ಊದಿಕೊಂಡಿತ್ತು.  ನಂತರ ತಜ್ಞ ವೈದ್ಯರನ್ನು ಭೇಟಿಯಾಗಿದ್ದ ಮಾಜಿ ಪ್ರಧಾನಿಗಳು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಕಾಲು ನೋವಿನ ನಡುವೆಯೂ ಜನರಿಗೆ ಬೇಸರ ಆಗಬಾರದೆಂದು ತಮ್ಮ ನಿವಾಸಕ್ಕೆ ಬಂದಿರುವ ಜನರ ಸಮಸ್ಯೆಯನ್ನು ಆಲಿಸುವುದನ್ನು ನಿಲ್ಲಿಸಿರಲಿಲ್ಲ.

ಕಾಲಿನ ನೋವು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಇಂದು ( ಮಂಗಳವಾರ) ಸಂಜೆ ದೇವೇಗೌಡರು ದೆಹಲಿಗೆ ತೆರಳಲಿದ್ದಾರೆ. ಬುಧವಾರ ಸಂಸತ್‍ನ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆಯಲ್ಲಿ ದೇವೇಗೌಡರು ಭಾಷಣ ಮಾಡುವ ಸಾಧ್ಯತೆಯಿದೆ.

ಅವರು ದೆಹಲಿಗೆ ತೆರಳುವ ಮುನ್ನ ದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟ ಪ್ರಥಮ್ ಆರೋಗ್ಯ ವಿಚಾರಿಸಿದ್ದಾರೆ. ಈ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪ್ರಥಮ್ “ದೇವೇಗೌಡರ ಆರೋಗ್ಯ ವಿಚಾರಿಸಿದೆ.ಅದೇ ಪ್ರೀತಿ,ಅಭಿಮಾನ.ಕಂಡೊಡನೆ ಬಹಳ ಆದರದಿಂದ ಮಾತಾಡಿದ್ರು.ಕಾಲು ನೋವಾಗಿದ್ದ ಜಾಗ ತೋರಿಸಿ,ಏನೂ ಆಗಿಲ್ಲ ಸಣ್ಣ  ನೋವು ಅಷ್ಟೇ ಅಂತ ನನಗೆ ಧೈರ್ಯ ಹೇಳಿದ್ರು” ಅಂದಿದ್ದಾರೆ.

ಪ್ರಥಮ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಮುನ್ನ ದೇವೇಗೌಡರು ಹರಸಿ ಹಾರೈಸಿ ಕಳುಹಿಸಿಕೊಟ್ಟಿದ್ದರು.

ಇದೇ ವೇಳೆ ಶಿವರಾಜ್ ಕುಮಾರ್ ದಂಪತಿ, ಮಧು ಬಂಗಾರಪ್ಪ ಪದ್ಮನಾಭನಗರಕ್ಕೆ ಭೇಟಿ ನೀಡಿ ದೇವೇಗೌಡರ ಆರೋಗ್ಯ ವಿಚಾರಿಸಿದರು.

Advertisements

One Comment on “ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಥಮ್ :ಒಳ್ಳೆ ಹುಡುಗನ ಕಂಡು ಮಾಜಿ ಪಿಎಂ ಹೇಳಿದ್ದೇನು..?

  1. Pingback: ಸೋತ ಹತಾಶೆಯಲ್ಲಿದ್ದಾರೆ ಕವಿತಾ : ಚಿನ್ನು ವಿರುದ್ಧ ಮತ್ತೆ ಕ್ಯಾತೆ ತೆಗೆದ ಆ್ಯಂಡಿ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: