Advertisements

ನಿಮ್ಮ ಕೈಯಲ್ಲಿರುವ ಫೋನ್ ಯಾವುದು :ಅಧಿಕ ರೇಡಿಯೇಷನ್ ಹೊರ ಸೂಸುವ ಫೋನ್ ಪಟ್ಟಿ ಇಲ್ಲಿದೆ

ಜನರ ಕೈಯಲ್ಲಿ ಫೋನ್ ಇಲ್ಲ ಅಂದ್ರೆ ಜೀವನ ಸಾಗೋದಿಲ್ಲ. ಇನ್ನು ಸ್ಮಾರ್ಟ್ ಫೋನ್ ಇಲ್ಲ ಅಂದ್ರೆ ಅದು ಬದುಕೇ ಅಲ್ಲ.

ಸ್ಮಾರ್ಟ್ ಫೋನ್ ಅನ್ನುವುದು ಇದೀಗ ನಿತ್ಯಜೀವನದ ಅಂಗವಾಗಿ ಹೋಗಿದೆ. ಫೇಸ್ ಬುಕ್, ವಾಟ್ಸಾಪ್ ಹೊಂದಿಲ್ಲ ಅಂದ್ರೆ ಅನ್ಯಗ್ರಹದಿಂದ ಬಂದವರಂತೆ ಕಾಣುತ್ತಾರೆ ಅನ್ನುವ ಒಂದೇ ಕಾರಣಕ್ಕೆ ಜನ ಸ್ಮಾರ್ಟ್ ಫೋನ್ ಗಳತ್ತ ಮೊರೆ ಹೋಗುತ್ತಿದ್ದಾರೆ.

ಹೀಗಾಗಿಯೇ ಹಲವು ಕಂಪನಿಗಳು ಕಡಿಮೆ ದರಕ್ಕೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಡಿಮೆ ದರದ ಫೋನ್ ಗಳು ಎಲ್ಲಾ ಫೋನ್ ಗಳಂತೆ ಕೆಲಸ ಮಾಡುತ್ತದೆ ತಾನೇ ಅಂದುಕೊಳ್ಳಬಹುದು. ಅದರ ಜೊತೆಗೆ ರೇಡಿಯೇಶನ್ ಅನ್ನುವ ಪೀಡೆಯನ್ನು ಜೊತೆಗೆ ಹೊತ್ತು ತರುತ್ತದೆ.

ಇದೀಗ ಜರ್ಮನ್ ಫೆಡರಲ್ ಆಫೀಸ್ ಫರ್ ರೇಡಿಯೇಶನ್ ಪ್ರೊಟೆಕ್ಷನ್ ಕಂಪೆನಿ ಬಿಡುಗಡೆ ಮಾಡಿರುವ ವರದಿ ಬೆಚ್ಚಿ ಬೀಳಿಸುವಂತಿದೆ. ಶಿಯೋಮಿ, ವನ್‌ ಪ್ಲಸ್‌ನ ನಾಲ್ಕು ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಪಾಯಕಾರಿ ಎಂದು ಹೇಳಿದೆ.

ಮುಖ್ಯವಾಗಿ ಚೀನಾ ಸ್ಮಾರ್ಟ್‍ಫೋನ್ ತಯಾರಿ ಕಂಪೆನಿಗಳ ನಾಲ್ಕು ಸ್ಮಾರ್ಟ್‌ಫೋನ್‌ಗಳು ಗರಿಷ್ಠ ಪ್ರಮಾಣದ ರೇಡಿಯೇಷನ್ ಬಿಡುಗಡೆ ಮಾಡುತ್ತಿವೆ ಎಂದು ವರದಿ ಬಹಿರಂಗಪಡಿಸಿದೆ.

ಟಾಪ್ 16ರ ಪಟ್ಟಿಯಲ್ಲಿ ಎಂಟು ಫೋನ್‌ಗಳು ಶಿಯೋಮಿ, ವನ್ ಪ್ಲಸ್‌ ಕಂಪೆನಿಯವು. ಶಿಯೋಮಿಯ ಆಂಡ್ರಾಯ್ಡ್ ವನ್ ಸ್ಮಾರ್ಟ್‌ಫೋನ್ ಎಂಐ ಎ1, ವನ್ ಪ್ಲಸ್ 5ಟಿ ಸ್ಮಾರ್ಟ್‌ಫೋನ್‌ಗಳು ಮೊದಲ ಸಾಲಿನಲ್ಲಿವೆ.

ಶಿಯೋಮಿ, ವನ್‌‍ಪ್ಲಸ್ ನಂತರದ ಸ್ಥಾನದಲ್ಲಿ ಆ್ಯಪಲ್ ಐ ಫೋನ್ 7 ನಿಲ್ಲುತ್ತದೆ. ಇದರ ಜತೆಗೆ ಆ್ಯಪಲ್ ಐ ಫೋನ್ 8, ಗೂಗಲ್ ಪಿಕ್ಸೆಲ್ 3, ಪಿಕ್ಸೆಲ್ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳ ರೇಡಿಯೇಷನ್ ಸಹ ಅತ್ಯಧಿಕವಾಗಿ ದಾಖಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಇನ್ನೊಂದು ಕಡೆ ಅತಿ ಕಡಿಮೆ ರೇಡಿಯೇಷನ್ ಪ್ರಭಾವ ಇರುವ ಫೋನ್‌ಗಳಲ್ಲಿ ಕೊರಿಯಾ ದಿಗ್ಗಜ ಸ್ಯಾಮ್ಸಂಗ್ ಡಿವೈಸ್‌ಗಳು ಇರುವುದು ಗಮನಾರ್ಹ.

ಎಲ್‍ಜಿ, ಹೆಚ್‍ಟಿಸಿ, ಮೊಟೊ, ಹುವಾವೆ, ಹಾನರ್‌ಗಳ ಕೆಲವು ಫೋನ್‌ಗಳು ಕಡಿಮೆ ರೇಡಿಯೇಷನ್ ಬಿಡುಗಡೆ ಮಾಡುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಚೀನಾ ಕಂಪೆನಿಗಳಾದ ಒಪ್ಪೊ, ವಿವೊ ತಯಾರಿಸಿದ ಸ್ಮಾರ್ಟ್‌ಫೋನ್‌ಗಳ ಪರೀಕ್ಷೆ ಇನ್ನಷ್ಟೇ ನಡೆಯಬೇಕಾಗಿದೆ.

ರೇಡಿಯೇಷನ್ ಹೆಚ್ಚಿರುವ 16 ಫೋನ್ ಗಳ ಪಟ್ಟಿ ಹೀಗಿದೆ

 1. Samsung Galaxy 8
 2. ZTE Axon Elite
 3. LG G7
 4. Samsung Galaxy A8
 5. Samsung Galaxy S8+
 6. Samsung Galaxy S7 Edge
 7. HTC U11 Life
 8. LG Q6/Q6+
 9. Samsung Galaxy S9+
 10. motorola Moto g5 plus
 11. Motorola Moto Z
 12. Samsung Galaxy J6+
 13. ZTE Blade A610
 14. Samsung Galaxy J4+
 15. Samsung Galaxy S8
 16. ZTE Blade V9
Advertisements

One Comment on “ನಿಮ್ಮ ಕೈಯಲ್ಲಿರುವ ಫೋನ್ ಯಾವುದು :ಅಧಿಕ ರೇಡಿಯೇಷನ್ ಹೊರ ಸೂಸುವ ಫೋನ್ ಪಟ್ಟಿ ಇಲ್ಲಿದೆ

 1. Pingback: ಸೋತ ಹತಾಶೆಯಲ್ಲಿದ್ದಾರೆ ಕವಿತಾ : ಚಿನ್ನು ವಿರುದ್ಧ ಮತ್ತೆ ಕ್ಯಾತೆ ತೆಗೆದ ಆ್ಯಂಡಿ – torrentspree

Leave a Reply

%d bloggers like this: