ನವದೆಹಲಿ : ಭಾರತ್ ಬಯೋಟೆಕ್ ಮಕ್ಕಳಿಗಾಗಿಯೇ ಸಂಶೋಧಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಗೆ ನೀಡಲು Drugs and Comptroller General of India (DCGI) ಅನುಮತಿ ನೀಡಿದೆ.
ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಈ ಲಸಿಕೆಯನ್ನು ಸಂಶೋಧಿಸಿದ್ದು ಈಗಾಗಲೇ ಎರಡನೇ ಹಾಗೂ ಮೂರನೇ ಹಂತದ ಟ್ರಯಲ್ ಅನ್ನು ಪೂರ್ಣಗೊಳಿಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಪ್ಟಂಬರ್ ತಿಂಗಳಲ್ಲಿ Drugs and Comptroller General of India (DCGI) ಗೆ ಸಲ್ಲಿಸಲಾಗಿತ್ತು.
ಇದೀಗ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ತಜ್ಞರ ಸಮಿತಿ 2 ರಿಂದ 18 ವರ್ಷದ ಮಕ್ಕಳಿಗೆ ಈ ಲಸಿಕೆಯನ್ನು ತುರ್ತು ಬಳಕೆಗಾಗಿ ನೀಡಬಹುದಾಗಿದೆ ಅಂದಿದೆ. ಎರಡು ಡೋಸ್ ಗಳ ಲಸಿಕೆ ಇದಾಗಿದ್ದು, ಮೊದಲ ಡೋಸ್ ನೀಡಿದ 20 ದಿನಗಳ ಬಳಿಕ ಎರಡನೇ ಡೋಸ್ ನೀಡಲು ಸೂಚಿಸಲಾಗಿದೆ.
ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ 18 ವರ್ಷ ಮೇಲ್ಪಟ್ಟವರಿಗೆ ನೀಡುವ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿಯನ್ನು ನೀಡಿಲ್ಲ. ಜುಲೈ ತಿಂಗಳಲ್ಲಿ ಎಲ್ಲಾ ದಾಖಲೆಗಳನ್ನು ಭಾರತ್ ಬಯೋ ಟೆಕ್ ಸಲ್ಲಿಸಿತ್ತು. ಹಾಗಿದ್ದರೂ ಅನುಮತಿಗಾಗಿ ಮೀನಾ ಮೇಷ ಎಣಿಸುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
Drugs and Comptroller General of India (DCGI) Covid-19 has granted emergency use approval to Bharat Biotech’s Covaxin for children in the 2-18 years age group.
Discussion about this post