ಬೆಂಗಳೂರು : ಹಿಂದೂ ಧರ್ಮ, ಹಿಂದೂ ದೇವರ ಬಗ್ಗೆ ಕೀಳಾಗಿ ಮಾತನಾಡುವ ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆದಿದೆ.
ಶ್ರೀರಾಮನ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದ ಭಗವಾನ್ ವಿರುದ್ಧ ವಕೀಲೆ ಮೀರಾ ರಾಘವೇಂದ್ರ ಖಾಸಗಿ ದೂರು ದಾಖಲಿಸಿದ್ದರು.
ಈ ಹಿನ್ನಲೆಯಲ್ಲಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಆಗಮಿಸಿದ್ದ ಭಗವಾನ್, ವಿಚಾರಣೆ ಎದುರಿಸಿದ್ದರು. ಬಳಿಕ ವಕೀಲರ ಮೂಲಕ ಜಾಮೀನು ಪಡೆದು ಹೊರ ಬಂದಿದ್ದರು.
ಈ ವೇಳೆ ಭಗವಾನ್ ಕೋರ್ಟ್ ಆವರಣದಿಂದ ಹೊರ ಬರುತ್ತಿದ್ದಂತೆ ಮೀರಾ ರಾಘವೇಂದ್ರ ಮುಖಕ್ಕೆ ಮಸಿ ಬಳಿದಿದ್ದಾರೆ.
ಮುಖಕ್ಕೆ ಮಸಿ ಬಳಿದ ಬಳಿಕ ಭಗವಾನ್ ವಿರುದ್ಧ ಕಿಡಿ ಕಾರಿದ ಮೀರಾ, ಇಷ್ಟೊಂದು ವಯಸ್ಸಾಗಿದೆ. ನಾಚಿಕೆಯಾಗಲ್ವ, ಶ್ರೀರಾಮನ ಬಗ್ಗೆ ಮಾತನಾಡುತ್ತೀರಾ ಎಂದು ಹೇಳಿದ್ದಾರೆ.
ಆದರೆ ಇಷ್ಟೆಲ್ಲಾ ಅವಮಾನವಾದರೂ ಭಗವಾನ್ ಏನೂ ಆಗಿಲ್ಲ ಅನ್ನವಂತೆ ಮುಂದೆ ಹೋಗಿದ್ದಾರೆ.
Discussion about this post