ಭಗವಂತ್ ಕೇಸರಿ ( Bhagavanth Kesari )ಮೂಲಕ ಬಾಲಣ್ಣ ಮತ್ತೊಮ್ಮೆ ಅಬ್ಬರಿಸಿದ್ದಾರೆ, ಈ ಬಾರಿ ಅವರದ್ದು ಎಮೋಷನಲ್ ಪಾತ್ರ
ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ ವೀರಸಿಂಹ ರೆಡ್ಡಿ ಸಂಕ್ರಾಂತಿಯಂದು ಬಿಡುಗಡೆಗೊಂಡು ಸದ್ದು ಮಾಡಿತ್ತು. ಆದಾದ ನಂತ್ರ ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ಇಂದು ಬಹು ನಿರೀಕ್ಷಿತ ಭಗವಂತ್ ಕೇಸರಿ ( Bhagavanth Kesari) ಸಿನಿಮಾ ಬಿಡುಗಡೆಯಾಗಿದ್ದು ಪ್ರೇಕ್ಷಕರನ್ನು ಮೋಡಿ ಮಾಡಿದೆ.
F2: Fun and Frustration ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ಅನಿಲ್ ರವಿಪುಡಿ ಜೊತೆ ಬಾಲಯ್ಯ ಈ ಬಾರಿ ಕೈ ಜೋಡಿಸಿದರು. ಟ್ರೇಲರ್ ಬಿಡುಗಡೆ ಹೊತ್ತಿನಲ್ಲೇ ಸಿನಿಮಾ ಸಾಕಷ್ಟು ಭರವಸೆಗಳನ್ನು ಮೂಡಿಸಿತ್ತು, ಬಾಲಯ್ಯ ವಯಸ್ಸಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು.
Read this : 2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ನಡೆದಿದ್ದು ಹೇಗೆ ಗೊತ್ತಾ..
ನಾಯಕಿ Vijji Papa (ಶ್ರೀಲೀಲಾ ) ಪೊಲೀಸ್ ಅಧಿಕಾರಿಯಾಗಿದ್ದ ತನ್ನ ತಂದೆಯನ್ನು ಹಠಾತ್ ಆಗಿ ಕಳೆದುಕೊಳ್ಳುತ್ತಾರೆ. ಈ ವೇಳೆ ಮಾಜಿ ಖೈದಿ ಭಗವಂತ ಕೇಸರಿ (ಬಾಲಕೃಷ್ಣ) ನಾಯಕಿಯ ಪಾಲಕರಾಗುತ್ತಾರೆ. ನಾಯಕಿಯ ತಂದೆಯ ಆಸೆಯಂತೆ Vijji Papaಳನ್ನು ಮಿಲಿಟರಿಗೆ ಸೇರಿಸಲು ಭಗವಂತ ಕೇಸರಿ ಪ್ರಯತ್ನಿಸುತ್ತಾನೆ. ಆದರೆ ಅದನ್ನು ನಾಯಕಿ ವಿರೋಧಿಸುತ್ತಾಳೆ. ಈ ನಡುವೆ ಉದ್ಯಮಿ ರಾಹುಲ್ ಸಾಂಘ್ವಿ (ಅರ್ಜುನ್ ರಾಂಪಾಲ್) ಪಿತೂರಿಯಿಂದ ನಾಯಕಿ ಸಂಕಷ್ಟಕ್ಕೆ ಸಿಲುಕುತ್ತಾಳೆ. ಭಗವಂತ ಕೇಸರಿಗೆ ಹಿಂದಿನಿಂದಲೂ ಪ್ರತಿಸ್ಪರ್ಧಿಯಾಗಿರುವ ರಾಹುಲ್ ಸಾಂಘ್ವಿಯೊಂದಿಗೆ ಸಂಘರ್ಷ ಶುರುವಾಗುತ್ತದೆ. ರಾಹುಲ್ ಸಾಂಘ್ವಿ ಮತ್ತು ಭಗವಂತ ಕೇಸರಿ ನಡುವೆ ಏನಾಯಿತು,ಸಂಘರ್ಷ ಹೇಗೆ ಅಂತ್ಯವಾಯ್ತು ಅನ್ನುವುದೇ ಕಥಾ ಹಂದರ. ಇದರೊಂದಿಗೆ ತಂದೆ ಮಗಳ ನಡುವಿನ ಸಂಬಂಧ ಪ್ರೇಕ್ಷಕರಲ್ಲಿ ಕಣ್ಣೀರು ತರಿಸಿದೆ.
ಉದ್ವೇಗ ಮತ್ತು ಹಾಸ್ಯ ಮಿಶ್ರಿತ ವಯಸ್ಸಾದ ಪಾತ್ರವನ್ನು ಬಾಲಯ್ಯ ಭಗವಂತ ಕೇಸರಿಯಾಗಿ ಅಮೋಘವಾಗಿ ನಟಿಸಿದ್ದಾರೆ. ಇನ್ನು ಶ್ರೀಲೀಲಾ ಅವರು ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲಾರ್ಧದಲ್ಲಿ ಶ್ರೀಲೀಲಾ ನಟನೆ ನೀರಸ ಅನ್ನಿಸಿದ್ರೂ ಉತ್ತರಾರ್ಧದಲ್ಲಿನ ನಟನ ಮೊದಲ ನೀರಸವನ್ನು ಮರೆಸುವಂತೆ ಮಾಡಿದೆ.
ಇನ್ನು ಮನ ಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿರುವ ಕಾಜಲ್ ಅಗರ್ವಾಲ್ ಪಾತ್ರಕ್ಕೆ ಸೀಮಿತವಾಗಿದ್ದಾರೆ. ಇನ್ನು ಅರ್ಜುನ್ ರಾಂಪಾಲ್ ನಟನೆ ತೆಲುಗು ಸಿನಿಮಾಗಳಿಗೆ ಹೊಸ ವಿಲನ್ ಒಬ್ಬನನ್ನು ಪರಿಚಯಿಸಿದೆ. ಹಾಡಿನ ವಿಚಾರಕ್ಕೆ ಬರುವುದಾದ್ರೆ ಬಳಸಿರುವ ತಾಂತ್ರಿಕತೆಗಳು ಭಗವಂತ ಕೇಸರಿ ಹಾಡುಗಳಿಗೆ ಹಿನ್ನಡೆಯಾಗಿದೆ. ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ತನಕವೂ ಹಿನ್ನೆಲೆ ಸಂಗೀತ ಸಾಮಾನ್ಯ ಅನ್ನಿಸುತ್ತಿದೆ.
Starring: Nandamuri Balakrishna, Kajal Aggarwal, Sreeleela, Arjun Rampal, P. Ravi Shankar, R. Sarathkumar, Raghu Babu
Director: Anil Ravipudi
Producers: Harish Peddi, Sahu Garapati
Music Director: S Thaman
Cinematographers: C. Ramprasad
Editor: Tammiraju
Discussion about this post