ಕೊರೋನಾ ಮುಗಿಯಿತು ಅಂದುಕೊಂಡ್ರೆ ಹವಮಾನದ ಕಾರಣದಿಂದ ಹೊಸ ಆರೋಗ್ಯ ಸಮಸ್ಯೆ Bengaluru ನಲ್ಲಿ ಶುರುವಾಗಿದೆ
ಬೆಂಗಳೂರು : ರಾಜಧಾನಿ Bengaluruನಲ್ಲಿ ಏರುಪೇರಾಗುತ್ತಿರುವ ಹವಾಮಾನದಿಂದಾಗಿ ಜನರ ಆರೋಗ್ಯದಲ್ಲೂ ವ್ಯತ್ಯಾಸಗಳಾಗುತ್ತಿದೆ. ಅದರಲ್ಲೂ ಮಕ್ಕಳ ಆರೋಗ್ಯದಲ್ಲಿ ತುಂಬಾ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದೆ ಕೈಕಾಲು, ಬಾಯಿ ಹುಣ್ಣು, ಜ್ವರ, ನೆಗಡಿ, ಕೆಮ್ಮು ಸೇರಿ ಆರೋಗ್ಯ ಸಮಸ್ಯೆಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಕೆಲ ಖಾಸಗಿ ಶಾಲೆಗಳು ತರಗತಿಗೆ ರಜೆ ನೀಡಿವೆ.
ಇನ್ನು ಕೆಲ ಶಾಲೆಗಳು ನರ್ಸರಿ, LKG, UKG ಮತ್ತು ಪ್ರಾಥಮಿಕ ಶಾಲೆಗಳಲ್ಲಿ ರಜೆ ನೀಡಿ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದೆ. ಈ ಮೂಲಕ ಮತ್ತೆ ಕೊರೋನಾ ದಿನಗಳನ್ನು ನೆನಪಿಸಿದೆ.
ಇದನ್ನೂ ಓದಿ : Mangaluru Night curfew: ದಕ್ಷಿಣ ಕನ್ನಡಕ್ಕೆ ಗುಡ್ ನ್ಯೂಸ್ : ರಾತ್ರಿ ಹೊತ್ತು ಓಡಾಟ ನಡೆಸದಂತೆ ಜಿಲ್ಲಾಧಿಕಾರಿ ಮನವಿ
ಮಕ್ಕಳಲ್ಲಿ ಶೀತ, ನೆಗಡಿ, ಜ್ವರ, ಕೆಮ್ಮು ಜೊತೆಗೆ ಚರ್ಮ ಸೋಂಕು ಪ್ರಮುಖವಾಗಿ ಚಿಕನ್ ಪಾಕ್ಸ್, ಕಣ್ಣಿನ ಸೋಂಕು ಮತ್ತು ಕಾಲು ಬಾಯಿ ರೋಗ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೈಕಿ ಕೆಲವೊಂದು ಸೋಂಕು ಮಕ್ಕಳಿಂದ ಮಕ್ಕಳಿಗೆ ಹರಡುತ್ತಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಶಾಲೆಗೆ 3 ವಾರ ರಜೆ ನೀಡಿ ಆನ್ ಲೈನ್ ತರಗತಿ ಪ್ರಾರಂಭಿಸಲಾಗಿದೆ.
ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಜೊತೆಗೆ ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆ ಶೀತ ವಾತಾವರಣ ಸೃಷ್ಟಿಸಿದೆ. ಹೀಗಾಗಿ ಮಕ್ಕಳ ಸುರಕ್ಷತೆ ಮುಖ್ಯವೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಖಾಸಗಿ ಶಾಲೆಯ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.
Discussion about this post