ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದ್ದ ಸಂದರ್ಭದಲ್ಲಿ ಖರ್ಚಿಗಾಗಿ ಕಾರು ಮಾರಲಾಗಿತ್ತು. ಈಗ ಊರ ಮಂದಿ ಆಡಿಕೊಳ್ಳುತ್ತಾರೆ ಎಂದು ಕಾರು ಕದ್ದ ವ್ಯಕ್ತಿ ಇದೀಗ ಅಂದರ್ ಆಗಿದ್ದಾನೆ.
ಬೆಂಗಳೂರು : ಬಾಗೇಪಲ್ಲಿ ಮೂಲದ ವೆಂಕಟೇಶ್ ನಾಯ್ಕ್, ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದ್ದ. ಈ ಸಂದರ್ಭದಲ್ಲಿ ಚುನಾವಣಾ ವೆಚ್ಚಕ್ಕಾಗಿ ಸಾಲ ಕೂಡಾ ಮಾಡಿದ್ದ. ಇದಾದ ಬಳಿಕ ಸಾಲಗಾರರ ಕಾಟ ಹೆಚ್ಚಾಗುತ್ತಿದ್ದಂತೆ ತನ್ನ ಬ್ರೀಜಾ ಕಾರನ್ನು ಮಾರಿ ಸಾಲ ತೀರಿಸಿದ್ದ.
ಇನ್ನು ಕಾರು ಮಾರಿದ ಸುದ್ದಿ ಊರ ಮಂದಿಗೆ ತಿಳಿದರೆ ಅವಮಾನ ಎಂದು ಭಾವಿಸಿದ್ದ ವೆಂಕಟೇಶ್ ಬ್ರೀಜಾ ಕಾರು ಕದಿಯಲು ಸಂಚು ರೂಪಿಸಿದ್ದ. ಹೀಗಾಗಿ ಇದಕ್ಕೊಂದು ಪ್ಲಾನ್ ಮಾಡಿದ ವೆಂಕಟೇಶ್, OLX ನಲ್ಲಿ ಕಾರು ಮಾರಾಟಕ್ಕಿಟ್ಟವರ ಹುಡುಕಾಟ ಪ್ರಾರಂಭಿಸಿದ್ದಾನೆ. ಈ ವೇಳೆ ಹೆಬ್ಬಾಳ ಕಾಫಿ ಬೋರ್ಡ್ ಲೇ ಜೌಟ್ ನಿವಾಸಿ ಇಂಜಿನಿಯರ್ ರವೀಂದ್ರ ಇಲೂರಿ ಅವರು ತಮ್ಮ ಬ್ರೀಜಾ ಕಾರನ್ನು ಮಾರಾಟಕ್ಕಿರುವುದು ಗೊತ್ತಾಗಿದೆ.
ಹೀಗಾಗಿ ರವಿಂದ್ರ ಅವರನ್ನು ಸಂಪರ್ಕಿಸಿದ ವೆಂಕಟೇಶ್, ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಇದಾದ ಬಳಿಕ ರವೀಂದ್ರ ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂದ ಹಾಗೇ ಈ ಘಟನೆ ನಡೆದದ್ದು ಜನವರಿ 30ರಂದು.
ದೂರು ಸ್ವೀಕರಿಸಿದ ಬಳಿಕ ತನಿಖೆ ಪ್ರಾರಂಭಿಸಿದ್ರೆ, ವೆಂಕಟೇಶ್ ಸಿಕ್ಕಾಪಟ್ಟೆ ಬುದ್ದಿವಂತಿಕೆ ಉಪಯೋಗಿಸಿ ಕಳ್ಳತನ ಮಾಡಿದ್ದ. ತನ್ನ ನಂಬರ್ ನಿಂದ ಕಾರು ಮಾಲೀಕನಿಗೆ ಕರೆ ಮಾಡಿದ್ರೆ ಸಿಕ್ಕಿ ಬೀಳಬಹುದು ಎಂದು ಮೊಬೈಲ್ ಕದ್ದು ಅದನ್ನು ಬಳಕೆ ಮಾಡಿದ್ದ. ಮೊಬೈಲ್ ಸಂಖ್ಯೆಯ ಜಾಡು ಹಿಡಿದ್ರೆ ಈ ನಂಬರ್ ಇರೋ ಮೊಬೈಲ್ ಕಳುವಾಗಿರುವುದು ಗೊತ್ತಾಗಿದೆ.
ಹೀಗಾಗಿ OLX ಗೆ ಲಾಗಿನ್ ಆದ ಎರಡೂವರೆ ಸಾವಿರ ಐಪಿ ಆಡ್ರೆಸ್ ಗಳನ್ನು ಪೊಲೀಸರು ಜಾಲಾಡಿದ್ದಾರೆ. ಆಗ ಎರಡು ಐಪಿ ಆಡ್ರೆಸ್ ಮೇಲೆ ಅನುಮಾನು ಬಂದು ತಾಂತ್ರಿಕವಾಗಿ ತನಿಖೆ ಮಾಡಿದ ವೇಳೆ ದಾಸರಹಳ್ಳಿಯ ಮುಖ್ಯರಸ್ತೆಯಲ್ಲಿ ವೆಂಕಟೇಶ್ ಓಡಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
Discussion about this post