ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮವೊಂದರಲ್ಲಿ ಸಿಕ್ಕಾಪಟ್ಟೆ ಹಣ ಹಂಚಿದ್ದಾರೆ. ಶಾಸಕ ಜಮೀರ್ ಅಹಮ್ಮದ್ ಹಣ ಹಂಚುವ ವಿಡಿಯೋ ಗಳು ಹತ್ತಾರು ಸಲ ವೈರಲ್ ಆಗಿದೆ. ಆಗ ಯಾರೊಬ್ಬರೂ ದೂರು ದಾಖಲಿಸಿರಲಿಲ್ಲ.
ಮಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಹಣದ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ಎಸಿಬಿ ಹಾಗೂ ಇಡಿಗೆ ದೂರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಬೆಳ್ತಂಗಡಿಯ ಬಳೆಂಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರರ್ತರೊಬ್ಬರು, ನಾಯಕನನ್ನು ಮೆಚ್ಚಿಸುವ ಸಲುವಾಗಿ, ಶಾಸಕರು ಸಿಕ್ಕಾಪಟ್ಟೆ ಹಣವನ್ನು ಕಾರ್ಯಕರ್ತರಿಗೆ ಹಂಚುತ್ತಾರೆ. ದಿನದಲ್ಲಿ 10 ರಿಂದ 50 ಸಾವಿರ ಹಣ ಹಂಚುತ್ತಾರೆ ಅಂದಿದ್ದರು.
ಈ ಹೇಳಿಕೆಯ ಆಧಾರದಲ್ಲಿ ಇದೀಗ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಬೆಳ್ತಂಗಡಿ ಪೊಲೀಸ್ ಠಾಣೆ, ಎಸಿಬಿ ಮತ್ತು ಇಡಿಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಶಾಸಕರ ಅಕ್ರಮ ಆಸ್ತಿ, ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Discussion about this post