ಬೆಳ್ತಂಗಡಿ : ಮನೆಯವರೆಲ್ಲಾ ಸೇರಿ ನಡೆಸುತ್ತಿದ್ದ ತನ್ನದೇ ವೈಕುಂಠ ಸಮಾರಾಧನೆಗೆ ಮೃತ ವ್ಯಕ್ತಿಯೇ ಜೀವಂತವಾಗಿ ಎಂಟ್ರಿ ಕೊಟ್ಟ ಬೆಳ್ತಂಗಡಿಯ ಗರ್ಡಾಡಿ ಎಂಬಲ್ಲಿ ನಡೆದಿದೆ.
ಗ್ರಾಮದ ಶ್ರೀನಿವಾಸ ಯಾನೆ ಶೀನಮೊಯ್ಲಿ ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದರು. ಜನವರಿ 26 ರಿಂದು ಮನೆಯಿಂದ ಹೋದವರು ವಾಪಾಸ್ ಬಂದಿರಲಿಲ್ಲ.
ಈ ನಡುವೆ ಓಡಿಲ್ನಾಳ ಗ್ರಾಮದ ಕುಲ್ಲುಂಜಕೆರೆಯಲ್ಲಿ ಅನಾಥ ಶವವೊಂದು ಪತ್ತೆಯಾಗಿದ್ದು, ಅದು ಪೂರ್ತಿ ಕೊಳೆದು ಹೋಗಿದ್ದ ಕಾರಣ ಗುರುತು ಹಿಡಿಯುವ ಸ್ಥಿತಿಯಲ್ಲಿ ಇರಲಿಲ್ಲ.
ಹೀಗಾಗಿ ಅದು ಶೀನ ಮೊಯ್ಲಿಯವರ ಶವ ಎಂದೇ ಭಾವಿಸಿದ್ದ ಮನೆ ಮಂದಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಈ ನಡುವೆ ಜ್ಯೋತಿಷಿಯೊಬ್ಬರ ಬಳಿಗೆ ಹೋಗಿದ್ದ ಕುಟುಂಬ ಸದಸ್ಯರು ಪ್ರಶ್ನೆ ಕೇಳಿದಾಗ, ಶೀನ ಮೊಯ್ಲಿ ಸತ್ತಿಲ್ಲ, ಆತ ಬಂದೇ ಬರುತ್ತಾನೆ ಅಂದಿದ್ದಾರೆ.
ಜ್ಯೋತಿಷಿ ಮಾತನ್ನು ನಂಬಿ 10 ಮನೆಯವರು ಕಾದರು, ಶೀನ ಮೊಯ್ಲಿಯ ನೆರಳು ಕೂಡಾ ಕಾಣಿಸಲಿಲ್ಲ.
ಹೀಗಾಗಿ ವೈಕುಂಠ ಸಮಾರಾಧನೆಗೆ ನಿರ್ಧರಿಸಲಾಯ್ತು. ಕಾರ್ಯಕ್ರಮ ನಡೆಯುತ್ತಿದೆ ಅನ್ನುವಾಗಲೇ ಶೀನ ಮೊಯ್ಲಿ ಎಂಟ್ರಿ ಕೊಟ್ಟಿದ್ದಾರೆ.
ಹಾಗಾದ್ರೆ ಅಂದು ಅಂತ್ಯ ಸಂಸ್ಕಾರ ನಡೆಸಿದ ಶವ ಯಾರದ್ದು ಅನ್ನುವುದೇ ಯಕ್ಷ ಪ್ರಶ್ನೆ.
ಈ ನಡುವೆ ಭವಿಷ್ಯ ಹೇಳಿದ ಜ್ಯೋತಿಷಿಗೆ ಸಿಕ್ಕಾಪಟ್ಟೆ ಬೇಡಿಕೆಯಂತೆ.
Discussion about this post