ಲಕ್ಷ ಲಕ್ಷ ಖರ್ಚು ಮಾಡಿದರೂ ಚಿರತೆ ( belagavi leopard) ಹಿಡಿಯಲೂ ಇನ್ನೂ ಸಾಧ್ಯವಾಗಿಲ್ಲ
ಬೆಳಗಾವಿ : ಕಳೆದ 20 ದಿನಗಳಿಂದ ಬೆಳಗಾವಿ ಜನರ ನಿದ್ದೆ ಮಾತ್ರವಲ್ಲ ಪೊಲೀಸರ, ಅರಣ್ಯ ಇಲಾಖೆ ಅಧಿಕಾರಿಗಳ ನೆಮ್ಮದಿ ಕೆಡಿಸಿರುವ ಚಿರತೆ ( belagavi leopard) ಹಿಡಿಯಲು ಇನ್ನಲ್ಲದ ಸರ್ಕಸ್ ನಡೆಯುತ್ತಿದೆ. ಈ ನಡುವೆ ಅರಣ್ಯಾಧಿಕಾರಿಗಳ ಬಗ್ಗೆ ಆಕ್ರೋಶ ಕೂಡಾ ವ್ಯಕ್ತವಾಗುತ್ತಿದೆ. ಚಿರತೆ ಹಿಡಿಯಲು ವಿಫಲ ಅನ್ನುವ ಹೆಡ್ ಲೈನ್ ಗಳು ಬೇರೆ ಇದಕ್ಕೆ ಸಾಥ್ ಕೊಡುತ್ತಿದೆ.
Read More : NDTV ಖರೀದಿಗಾಗಿ ಅದಾನಿ ಮಾಸ್ಟರ್ ಪ್ಲಾನ್ : ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ ನಡೆ
ಹಾಗೇ ನೋಡಿದರೆ ಚಿರತೆ ಹಿಡಿಯಲು ಇಡೀ ವ್ಯವಸ್ಥೆ ಶ್ರಮಿಸುತ್ತಿದೆ. 250 ಎಕರೆ ವ್ಯಾಪ್ತಿಯಲ್ಲಿ ಚಿರತೆ ಹಿಡಿಯುವುದು ಸುಲಭದ ಮಾತಲ್ಲ. ಈಗಾಗಲೇ ಡ್ರೋನ್ ತರಿಸಲಾಗಿದೆ, ಆನೆ ನುಗ್ಗಿಸಲಾಗಿದೆ ಇಷ್ಟೆಲ್ಲಾ ಶ್ರಮಕ್ಕೂ ಚಿರತೆ ಸಿಕ್ಕಿಲ್ಲ. 2 ಆನೆ, 180 ಅರಣ್ಯ ಸಿಬ್ಬಂದಿ, 8 ಶಾರ್ಪ್ ಶೂಟರ್ಗಳು ಇಡೀ ಕಾಡು ಜಾಲಾಡಿದ್ದಾರೆ. ಹಾಗಾದ್ರೆ ಚಿರತೆ ಹಿಡಿಯುವ ತಂತ್ರ ಯಾವುದು ಅನ್ನುವುದನ್ನು ಟೀಕಿಸುವ ಮಂದಿಯೇ ಹೇಳಬೇಕು.
ಈ ನಡುವೆ ಚಿರತೆ ಹಿಡಿಯಲು ಮೂತ್ರ ತಂತ್ರ ಪ್ರಯೋಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಚಿರತೆ ಇರಬಹುದು ಅನ್ನುವ ಪ್ರದೇಶಗಳಲ್ಲಿ 9 ಬೋನ್ಗಳನ್ನು ಇಡಲಾಗಿದ್ದು, ಅದಕ್ಕೆ ಹೆಣ್ಣು ಚಿರತೆಗಳ ಮೂತ್ರ ಸಿಂಪಡಿಸಲಾಗಿದೆ. ಮೂತ್ರದ ವಾಸನೆಯ ಜಾಡು ಹಿಡಿದು ಬರುವ ಚಿರತೆ ಹನಿ ಟ್ರ್ಯಾಪ್ ಆಗಲಿದೆ ಅನ್ನುವ ವಿಶ್ವಾಸ ಅಧಿಕಾರಿಗಳದ್ದು.
Discussion about this post