ದಂಡ ಇಲ್ಲ ಎಂದು ಮಾಸ್ಕ್ ಹಾಕದೇ ರಸ್ತೆಗಿಳಿದ್ರೆ ಸೋಂಕು ಉಚಿತ. ಮಾಸ್ಕ್ ಹಾಕುವುದರಿಂದ ಕೋರೋನಾ ಮಾತ್ರವಲ್ಲ ಧೂಳಿನಿಂದಲೂ ರಕ್ಷಣೆ ಪಡೆಯಬಹುದಾಗಿದೆ.
ಬೆಂಗಳೂರು : ದೇಶಕ್ಕೆ ಕೊರೋನಾ ಸೋಂಕಿನ ನಾಲ್ಕನೇ ಅಲೆಯ ಭೀತಿ ಹೆಚ್ಚಾಗುತ್ತಿರುವಂತೆ, ಬೆಂಗಳೂರಿನಲ್ಲೂ ಕೊರೋನಾ ಸೋಂಕು ಏರಲಾರಂಭಿಸಿದೆ. ಮೂರು ತಿಂಗಳ ಬಳಿಕ ಗುರುವಾರ 458 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣಳ ಸಂಖ್ಯೆ 2776ಕ್ಕೆ ಏರಿಕೆಯಾಗಿದೆ. ಈ ಪೈಕಿ 19 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಐಸಿಯುನಲ್ಲಿ ಒಬ್ಬರು ಮತ್ತು ಸಾಮಾನ್ಯ ವಾರ್ಡ್ ನಲ್ಲಿ 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬೆಳವಣಿಗೆ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮಾಲ್, ಸಿನಿಮಾ ಮಂದಿರ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಲಸಿಕಾ ಪ್ರಮಾಣ ಪತ್ರ ಪರಿಶೀಲನೆಯನ್ನು ಕೂಡಾ ಕಡ್ಡಾಯ ಮಾಡಲಾಗಿದೆ.
ಈ ಆದೇಶ ಕಡ್ಡಾಯವಾಗಿ ಜಾರಿಯಾಗುವ ನಿಟ್ಟಿನಲ್ಲಿ ಪಾಲಿಕೆಯ ಮಾರ್ಷಲ್ ಗಳಿಗೆ ಆದೇಶ ನೀಡಲಾಗಿದ್ದು, ಗಸ್ತು ತಿರುಗುವಂತೆ ಸೂಚಿಸಲಾಗಿದೆ. ಸಧ್ಯಕ್ಕೆ ಮಾಸ್ಕ್ ಹಾಕದವರಿಗೆ ಎಚ್ಚರಿಕೆಯನ್ನು ನೀಡಲಾಗುತ್ತಿದ್ದು, ದಂಡ ವಿಧಿಸಲಾಗುವುದಿಲ್ಲ. ಆದರೆ ಜನ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರಿಸಿದರೆ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Discussion about this post