ಗುತ್ತಿಗೆದಾರರನ್ನು ರಕ್ಷಿಸಲು ಬಿಬಿಎಂಪಿ ಅಧಿಕಾರಿಗಳು ಹೊಸ ಐಡಿಯಾ ಹುಡುಕಿದ್ದಾರೆ. ಸಾಕ್ಷಿ ಹೇಳಲು ಹೆಗ್ಗಣಗಳು ಬರೋದಿಲ್ಲ ತಾನೇ
ಬೆಂಗಳೂರು : ರಾಜ್ಯದಲ್ಲಿ 40 ಪರ್ಸೆಂಟ್ ಅವ್ಯವಹಾರ ಆರೋಪದ ನಡುವೆ ಕಳಪೆ ಕಾಮಗಾರಿ ಎಂದಿನಂತೆ ಮುಂದುವರಿದಿದೆ. ಅದರಲ್ಲೂ ಬಿಬಿಎಂಪಿ ನಡೆಸುವ ಕಾಮಗಾರಿ ದೇವರಿಗೆ ಪ್ರೀತಿ. ದೇಶದ ಪ್ರಧಾನಿ ಬರುವ ಸಂದರ್ಭದಲ್ಲೂ ನಕಲಿ ಕಾಮಗಾರಿ ನಡೆಸಿ ದುಡ್ಡು ದೋಚಿದ್ದಾರೆ ಅಂದ್ರೆ ಜನಸಾಮಾನ್ಯರ ಕಥೆ ಏನಾಗಿರಬೇಡ.
ಈ ನಡುವೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲೂ ಕಳಪೆ ಆರೋಪ ಕೇಳಿ ಬಂದಿದ್ದು, ಸಾಕ್ಷಿ ಅನ್ನುವಂತೆ ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ಫುಟ್ ಪಾತ್ ಸ್ಲಾಬ್ ಗಳು ಕಿತ್ತು ಬರಲಾರಂಭಿಸಿದ್ದಾರೆ. ಮುಖ್ಯವಾಗಿ ನೃಪತುಂಗ ರಸ್ತೆಯಲ್ಲಿರುವ ಫುಟ್ ಪಾತ್ ಸ್ಥಿತಿ ಇಡೀ ನಗರದ ಕಾಮಗಾರಿಗೆ ಹಿಡಿದ ಕೈಗನ್ನಡಿಯಂತಿದೆ.
ಈ ಬಿಬಿಎಂಪಿ ಹೇಗಂದ್ರೆ ಎಲ್ಲಾದ್ರೂ ಕಳಪೆ ಕಾಮಗಾರಿಯಿಂದ ತೊಂದರೆಯಾಗಿರುವುದು ಮಾಧ್ಯಮಗಳಲ್ಲಿ ವರದಿಯಾದ್ರೆ ಸಾಕು, ತಕ್ಷಣ ಬೆಂಗಳೂರು ಜಲಮಂಡಳಿ ಮೇಲೆ ಹಾಕಿ ಬಿಡುತ್ತಾರೆ. ಆದರೆ ನೃಪತುಂಗ ರಸ್ತೆಯಲ್ಲಿ BWSSB ಕಾಮಗಾರಿ ನಡೆದಿಲ್ಲ. ಹೀಗಾಗಿ ಇದೀಗ ಫುಟ್ ಪಾತ್ ಮೇಲಿನ Block ಗಳು ಕಿತ್ತು ಹೋಗಲು ಹೆಗ್ಗಣಗಳು ಕಾರಣ ಅಂದಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಬಿಬಿಎಂಪಿ ಚೀಫ್ ಇಂಜಿನಿಯರ್ ಲೋಕೇಶ್ ಅವರೇ ಫುಟ್ ಪಾತ್ ಹಾಳಾಗಲು ಹೆಗ್ಗಣ ಕಾರಣ ಅಂದಿದ್ದಾರಂತೆ. ನೃಪತುಂಗ ರಸ್ತೆಯಲ್ಲಿರುವ PWD ಕ್ಯಾಂಟೀನ್ ನಿಂದ ಬರೋ ಹೆಗ್ಗಣಗಳು ಈ ಕೃತ್ಯ ಎಸಗುತ್ತಿದೆ ಅನ್ನುವುದು ಬಿಬಿಎಂಪಿ ಚೀಫ್ ಇಂಜಿನಿಯರ್ ಲೋಕೇಶ್ ಮಾತಾಗಿದೆಯಂತೆ.
ಅಯ್ಯೋ ದೇವರೇ, ನಿಜಕ್ಕೂ ನಮ್ಮ ಬಿಬಿಎಂಪಿ ಇಂಜಿನಿಯರ್ ಗಳನ್ನು ಚಂದ್ರಲೋಕಕ್ಕೆ ಟೂರ್ ಕಳುಹಿಸಬೇಕು.
Discussion about this post