ಭಾನುವಾರ ಪ್ರಸಾರವಾದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ, ಪತ್ರಕರ್ತ, ಸಿನಿಮಾ ನಿರ್ದೇಶಕ, ಸಾಹಿತಿ ಖ್ಯಾತಿಯ ಚಂದ್ರಚೂಡ್ ಮಂಜು ಪಾವಗಡ ವಿರುದ್ಧ ಕೆಂಡ ಕಾರಿದ್ದರು. ಒಬ್ಬ ಹುಡುಗಿಯನ್ನು ಬಳಸಿಕೊಂಡು ಮಂಜು ಆಟವಾಡುತ್ತಿದ್ದಾನೆ ಅನ್ನುವ ಅರ್ಥದಲ್ಲಿ ವಾಗ್ದಾಳಿ ನಡೆಸಿದ್ದರು.
ಈ ವೇಳೆ ಮಂಜು ಪಾವಗಡ, ಚೂಡ್ ಅವರ ಕಥೆಯೇನು ಅನ್ನುವುದು ನನಗೆ ಗೊತ್ತು ಅಂದಿದ್ದಾರೆ. ಅದ್ಯಾಕೆ ನಾನು ಹಾಗೇ ಅಂದೆ ಅನ್ನುವುದಕ್ಕೂ ವಿವರಣೆ ಕೊಟ್ಟಿದ್ದಾರೆ. ಚಂದ್ರಚೂಡ್ ಅಂದ್ರೆ ಯಾರು ಅಂತಾ ನೋಡಿರಲಿಲ್ಲ. ಅವರ ಬಗ್ಗೆ ನಾನು ಕೇಳಿದ್ದೆ. ಇದೇ ಕಥೆಯ ( ಚಂದ್ರಚೂಡ್ ಅವರು ಶೃತಿ ಮದುವೆ ಕಾರಣದಿಂದ ಸುದ್ದಿಯಾಗಿದ್ದರು.) ಹಿನ್ನಲೆಯಲ್ಲಿ ಅವರ ಬಗ್ಗೆ ಕೇಳಿದ್ದೆ ಅಂದಿದ್ದಾರೆ.
ಇದನ್ನು ಓದಿ : ಇನ್ಸ್ಟಾ ನೇರ ಪ್ರಸಾರದಲ್ಲಿ ಚಂದ್ರಚೂಡ್ ಚಳಿ ಬಿಡಿಸಿದ ಪ್ರಿಯಾಂಕ
ಈ ಹೇಳಿಕೆ ಮೂಲಕ ಮಂಜು ಪಾವಗಡ ಅವರನ್ನು ಕಟ್ಟಿ ಹಾಕಲು ಹೋದ ಚೂಡ್, ನಾನು ಭಾರತದ ಸಂವಿಧಾನಕ್ಕೆ ಬದ್ಧನಾಗಿ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದೇನೆ ಎಂದು ಘೋಷಿಸಿದ್ದರು. ಆದರೆ ಅವರು ಕಾನೂನು ಪ್ರಕಾರ ಡಿವೋರ್ಸ್ ಕೊಟ್ಟಿಲ್ಲ. ನ್ಯಾಯಾಲಯ ಕಿವಿ ಹಿಂಡಿದ ಮೇಲೆಯೇ ಅವರು ಕಾನೂನಿಗೆ ಗೌರವ ಕೊಟ್ಟಿದ್ದು. ಶೃತಿಯವರನ್ನು ಮದುವೆಯಾಗುವ ಸಂದರ್ಭದಲ್ಲಿ ಚಂದ್ರಚೂಡ್ ಮೊದಲ ಹೆಂಡತಿಗೆ ಡಿವೋರ್ಸ್ ಕೊಟ್ಟಿರಲಿಲ್ಲ. ಮೊದಲ ಮದುವೆ ಡಿವೋರ್ಸ್ ಆಗದ ಹೊರತು ಎರಡನೆ ಮದುವೆಯಾಗುವುದು ಅಪರಾಧ ಎಂದು ನ್ಯಾಯಾಲಯ ಆ ಕಾಲದಲ್ಲೇ ನೀತಿ ಪಾಠ ಹೇಳಿತ್ತು. ಅಷ್ಟೇ ಅಲ್ಲದೆ ಚಂದ್ರಚೂಡ್ ತಪ್ಪು ಹೆಜ್ಜೆಗಳ ಕಾರಣದಿಂದಲೇ ಶೃತಿ ಹಾಗೂ ಚಂದ್ರಚೂಡ್ ಮದುವೆಯನ್ನು ನ್ಯಾಯಾಲಯ ಅಸಿಂಧುಗೊಳಿಸಿತ್ತು.
ಇದನ್ನು ಓದಿ : 2015ರಲ್ಲೇ ಬಿಗ್ ಬಾಸ್ ಮನೆಗೆ ಹೋಗಬೇಕಾಗಿತ್ತು ಚಂದ್ರಚೂಡ್… ಮಹಿಳೆಯೊಬ್ಬಳ ಕಾರಣಕ್ಕೆ ಹೋಗಿಲ್ಲ ಅಂದ್ರೆ ನಂಬ್ತೀರಾ
ಮದುವೆಯ ವಿಚಾರದಲ್ಲಿ ಚೂಡ್ ಕಾನೂನು ಉಲ್ಲಂಘನೆ ಮಾಡಿರುವುದು ಜಗತ್ತಿಗೆ ಗೊತ್ತಿದೆ, ಹಾಗಿದ್ದ ಮೇಲೂ ಮಹಾಮನೆಯಲ್ಲಿ ಚಂದ್ರಚೂಡ್ ಹಸಿ ಹಸಿ ಸುಳ್ಳು ಹೇಳಿದ್ದಾರೆ.
ಇನ್ನೂ ಬಿಗ್ ಬಾಸ್ ಅನ್ನುವುದು ದೇಶ ಕಟ್ಟುವ ಕಾರ್ಯಕ್ರಮವಲ್ಲ. ಕನ್ನಡ ಉಳಿಸುವ ಕಾರ್ಯಕ್ರಮವಲ್ಲ, ಬದಲಿಗೆ ಅದೊಂದು ಮನೋರಂಜನಾ ಕಾರ್ಯಕ್ರಮ. ಬಿಗ್ ಬಾಸ್ ನ ಮೂಲ ಕಾರ್ಯಕ್ರಮ ಬಿಗ್ ಬ್ರದರ್ ಅನ್ನು ನೋಡಿದವರಿಗೆ ಈ ಕಾರ್ಯಕ್ರಮ ಉದ್ದೇಶ ಗೊತ್ತಿರುತ್ತದೆ. ಅದು ಪಕ್ಕಾ ನಾಟಕದ ಮನೆ. ಇಲ್ಲಿ ಗೆಲ್ಲುವ ಸಲುವಾಗಿ ಎಂಥಾ ನೌಟಂಕಿ ಆಟಗಳು ನಡೆಯುತ್ತದೆ. ಅಷ್ಟೇ ಅಲ್ಲದ ಮಂಜು ಹಾಗೂ ದಿವ್ಯಾ ಸುರೇಶ್ ನಾವಿಬ್ಬರೂ ನಾಟಕ ಮಾಡುತ್ತಿದ್ದೇವೆ ಎಂದು ವೀಕ್ಷಕರಿಗೆ ಹೇಳಿದ್ದಾರೆ. ಹಾಗಿದ್ದ ಮೇಲೆ ಮಂಜು ಪಾವಗಡ ಮೇಲೆ ಚೂಡ್ ತಿರುಗಿ ಬಿದ್ದಿರುವುದನ್ನು ನೋಡಿದರೆ ಹಳ್ಳಿ ಪ್ರತಿಭೆಯನ್ನು ಮುಗಿಸುವ ಯತ್ನ ಅನ್ನುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ : ಅಯ್ಯೋ ದೇವರೇ…. ಮೂರನೇ ಮದುವೆಯಾಗಲು ಹೊರಟ್ರ ಚಕ್ರವರ್ತಿ ಚಂದಚೂಡ
Discussion about this post