Monday, April 19, 2021

2015ರಲ್ಲೇ ಬಿಗ್ ಬಾಸ್ ಮನೆಗೆ ಹೋಗಬೇಕಾಗಿತ್ತು ಚಂದ್ರಚೂಡ್… ಮಹಿಳೆಯೊಬ್ಬಳ ಕಾರಣಕ್ಕೆ ಹೋಗಿಲ್ಲ ಅಂದ್ರೆ ನಂಬ್ತೀರಾ

Must read

- Advertisement -
- Advertisement -

ಬಿಗ್ ಬಾಸ್ ಸೀಸನ್ 8ಕ್ಕೆ ಮತ್ತಷ್ಟು ರಂಗು ತುಂಬುವ ಸಲುವಾಗಿ ಚಂದ್ರಚೂಡ್ ಅನ್ನುವವರನ್ನು ಕಲರ್ಸ್ ವಾಹಿನಿ ಕಳುಹಿಸಿಕೊಟ್ಟಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಚಂದ್ರಚೂಡ್ ನಮ್ಮ ಸಂಸಾರ ಆನಂದ ಸಾಗರ ಅನ್ನುತ್ತಿರುವ ಮಹಾಮನೆಯಲ್ಲಿ ದ್ವೇಷದ ಕಿಡಿ ಹೊತ್ತಿಸುವ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಒಡೆದು ಆಳುವ ನೀತಿಯನ್ನು ಪ್ರಯೋಗಿಸಿರುವ ಚಂದ್ರಚೂಡ್, ಇದಕ್ಕೆ ಪ್ರಶಾಂತ್ ಸಂಬರಗಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಪಾಪ ಆತ್ಮೀಯ ಗೆಳೆಯನ ಕೈಯಲ್ಲಿ ದಾಳವಾಗುತ್ತಿದ್ದೇನೆ ಅನ್ನುವುದು ಗೊತ್ತಿಲ್ಲದೆ ಅವರು ಆಡುತ್ತಿದ್ದಾರೆ.

ಈ ನಡುವೆ ಚಂದ್ರಚೂಡ್ ಅವರಿಗೆ ಬಿಗ್ ಬಾಸ್ ಮನೆಯ ಆಫರ್ ಇದೇನು ಹೊಸದಲ್ಲ. ಈ ಹಿಂದೆ ಅವರನ್ನು ಬಿಗ್ ಬಾಸ್ ಮನೆಗೆ ಆಹ್ವಾನಿಸಲಾಗಿತ್ತು. ಅದು ಕೂಡಾ 2015ರಲ್ಲಿ.

ಆ ವೇಳೆ ನಟಿ ಶೃತಿ ಬಿಗ್ ಬಾಸ್ ಮನೆಯಲ್ಲಿದ್ದರು. ಆಟಕ್ಕೆ ಒಂದಿಷ್ಟು ಖದರ್ ತುಂಬುವ ನಿಟ್ಟಿನಲ್ಲಿ ಚಂದ್ರಚೂಡ್ ಮನೆಯೊಳಗಡೆ ಹೋಗ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಚಂದ್ರಚೂಡ್ ಹೋಗಿರಲಿಲ್ಲ.

2013ರಲ್ಲಿ  ಶೃತಿ ಮತ್ತು ಚಂದ್ರಚೂಡ್ ಮದುವೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ನಡೆದಿತ್ತು.  ಶಾಸ್ತ್ರಬದ್ಧವಾಗಿ ಮದುವೆ ನಡೆದರೂ  ಮುಂದೆ ಕಾನೂನಿನ ತೊಡಕು ಎದುರಾಗಿತ್ತು. ಮದುವೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ಈಗ ಇತಿಹಾಸ.

ಆ ಬಳಿಕ ಚಂದ್ರಚೂಡ್ ಹಾಗೂ ಶೃತಿ ಕೂಡಾ ಬೇರೆ ಬೇರೆಯಾಗಿದ್ದು ಈಗ ಮತ್ತೊಂದು ಇತಿಹಾಸ.

ಆದರೆ 2015ರಲ್ಲಿ ಚಂದ್ರಚೂಡ್ ಬಿಗ್ ಬಾಸ್ ಮನೆಗೆ ಯಾಕೆ ಹೋಗಿಲ್ಲ ಅನ್ನುವ ಕುರಿತಂತೆ ರವಿ ಬೆಳಗರೆ ಸಾರಥ್ಯದ ಹಾಯ್ ಬೆಂಗಳೂರು ಪತ್ರಿಕೆ ಬೇರೆಯದ್ದೇ ರೀತಿಯ ವರದಿ ಕೊಟ್ಟಿತ್ತು.

- Advertisement -
- Advertisement -
- Advertisement -

Latest article