ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಗಮನ ಸೆಳೆದಿರುವ ಹಾಸ್ಯಗಾರ ಅಂದ್ರೆ ಅದು ಪಾವಗಡ ಮಂಜು.
ತನ್ನದೇ ಆದ ಕಾರಣಕ್ಕಾಗಿ ಮಂಜು ಮನೆ ಮಂದಿಯ ಆಪ್ತನಾಗಿರೋದು ಮಾತ್ರವಲ್ಲದೆ, ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿದ್ದಾನೆ.
ಈ ನಡುವೆ ಮಹಾಮನೆಯ ಆಟಕ್ಕೊಂದು ಟ್ವಿಸ್ಟ್ ಕೊಟ್ಟಿರುವ ಬಿಗ್ ಬಾಸ್, ಮಂಜು ಬಾಯಿಗೆ ಪ್ಲಾಸ್ಟರ್ ಹಾಕಿದ್ದಾರೆ. ಜೊತೆಗೆ ಅನೇ ಮಾತನಾಡಬೇಕಾದರೂ ವೈಷ್ಣವಿ ಮೂಲಕ ಮಾತನಾಡಬೇಕು ಹಾಗೂ ಅದು ಸನ್ನೆಯ ಮೂಲಕವೇ ಇರಬೇಕು ಅಂದಿದ್ದಾರೆ.
ಈ ಟಾಸ್ಕ್ ಕಾರಣದಿಂದ ಕ್ಯಾಮಾರ ಮುಂದೆ ಕಾಣಿಸಿಕೊಳ್ಳದ ಸನ್ನಿಧಿ ತೆರೆಯ ಮೇಲೆ ಕಾಣಿಸಿಕೊಳ್ಳುವಂತಾಗಿದೆ. ಆ ಮಟ್ಟಿಗೆ ವೈಷ್ಣವಿ ಮಂಜನಿಗೆ ಋಣಿಯಾಗಿರಬೇಕು.
ಇನ್ನು ಮಂಜ ಈ ಟಾಸ್ಕ್ ಅನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ. ಮಾತಿಲ್ಲದೆ ಕೇವಲ ಸನ್ನೆಯಲ್ಲೂ ಜನರನ್ನು ನಗಿಸಬಹುದು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಅದರಲ್ಲೂ ಬಾಲ್ಯದಲ್ಲಿ ಕೋಳಿ ಕಥೆಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿರುವುದು ಮಂಜನ ತಾಕತ್ತಿಗೊಂದು ಸ್ಯಾಂಪಲ್.
ಇನ್ನು ವೈಷ್ಣವಿಗೂ ಇದರಿಂದ ಸಾಕಷ್ಟು ಲಾಭವಾಗಿದೆ. ಒಂದೂವರೆ ಗಂಟೆ ಪ್ರಸಾರವಾಗುತ್ತಿದ್ದ ಕಾರ್ಯಕ್ರಮದ ಬಹುತೇಕ ಫ್ರೇಮ್ ಗಳಲ್ಲಿ ಮಂಜ ಬಂದು ಹೋಗುತ್ತಿದ್ದ. ಇದೀಗ ಮಂಜನ ಕಾರಣಕ್ಕಾಗಿ ವೈಷ್ಣವಿ ಕಾಣಿಸಿಕೊಳ್ಳುತ್ತಿದ್ದಾರೆ.
Discussion about this post