ಕಾಸರಗೋಡು : ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ದೊಡ್ಡ ಆಲದ ಮರವೊಂದು ಉರುಳಿ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಆನೇಕಲ್ಲು ಎಂಬಲ್ಲಿ ನಡೆದಿದೆದ. ಈ ಪ್ರದೇಶ ಕರ್ನಾಟಕ ಮತ್ತು ಕೇರಳದ ಗಡಿ ಪ್ರದೇಶವಾಗಿದೆ.
ಮರ ಉರುಳಿ ಬಿದ್ದ ತಕ್ಷಣ ಮನೆ ಮಾಲೀಕ ಅಬ್ಬಾಸ್ ಹಾಗೂ ಮನೆ ಮಂದಿ ತಕ್ಷಣವೇ ಹೊರಗಡೆ ಓಡಿ ಬಂದಿದ್ದಾರೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಮರ ಬಿದ್ದ ರಭಸಕ್ಕೆ ಇಡೀ ಮನೆ ಸಂಪೂರ್ಣ ಜಖಂಗೊಂಡಿದೆ.
Discussion about this post