ಕರಾವಳಿಯಲ್ಲಿ ಬಾಳೆ ಎಲೆ ಊಟ ಹೊಸದಲ್ಲ. ಅದು ಅಲ್ಲಿನ ಸಂಪ್ರದಾಯ. ಆದೆರ ಅಧುನಿಕತೆಯ ಗಾಳಿಗೆ ಸಿಲುಕಿದ ಕರಾವಳಿ ಇದೀಗ ಪ್ಲಾಸ್ಟಿಕ್ ಪ್ರೀತಿ ಬೆಳೆಸಿಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಪರಿಸರ ಪ್ರೀತಿ, ಸಂಪ್ರದಾಯ ರಕ್ಷಕರಂತೆ ಫೋಸು ಕೊಡುವವರೇ ಹೆಚ್ಚಾಗಿದ್ದಾರೆ.
ಈ ನಡುವೆ ಶಾಸಕ ವೇದವ್ಯಾಸ ಕಾಮತ್ ಬಾಳೆಎಲೆ ಕುರಿತಂತೆ ಪ್ರಸ್ತಾಪಿಸಿದ್ದು ದೊಡ್ಡದಾಗಿ ಸುದ್ದಿ ಮಾಡಿತು.
ಹಾಗಾದರೆ ಬಾಳೆ ಎಲೆ ಊಟ ಮಾಡಿದರೆ ಲಾಭವೇನು… ಅದರ ವೈಜ್ಞಾನಿಕ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿದೆ.
ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.
ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ತುಂಬಾ ಹೊತ್ತು ಬದುಕುವುದಿಲ್ಲ ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಅವು ಸತ್ತಿರುತ್ತವೆ.
ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ (Free radicals) ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.
ಚೆನ್ನೈನ ಆಯುರ್ವೇದ ತಜ್ಞರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.
ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ಅಂದ್ರೆ ( ಟಿವಿ ಜಾಹೀರಾತಿನಲ್ಲಿ ತೋರಿಸುವ ತಟ್ಟೆ ತೊಳೆಯುವ ಕೆಮಿಕಲ್) ನಿಮ್ಮ ಹೊಟ್ಟೆ ಸೇರಬಹುದು. ಆದರೆ, ಬಾಳೆ ಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.
ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು. ಗ್ಯಾಸ್ ಅಡುಗೆಯಿಂದ ಆಹಾರವನ್ನು ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.
ಬಾಳೆ ಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ. ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ. ಭವಿಷ್ಯದಲ್ಲಿ ಚರ್ಮರೋಗಗಳು ಬಾರದಂತೆ ತಡೆಯುವ ವೈದ್ಯೋದ್ದೇಶ ಇದರದ್ದು. ತೆಂಗಿನೆಣ್ಣೆ ಲೇಪಿತ ಬಾಳೆ ಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಬಾಳೆ ಎಲೆಯಲ್ಲಿ ಊಟ ಮಾಡಿ ಹಾಗೇ ಎಸೆದರೂ ಅದರಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಬಾಳೆ ಎಲೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಬಾಳೆ ಎಲೆ ಊಟ ಶುಚಿ, ರುಚಿ ಹಾಗೂ ಇದನ್ನು ಬಿಸಾಡಿದರೆ ಗೊಬ್ಬರವಾಗುವುದರಿಂದ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ.
ಬಾಳೆ ಎಲೆಯನ್ನು ತೊಳೆಯಲು ಹೆಚ್ಚು ನೀರು ಬೇಕಾಗಿಲ್ಲ, ತಿಂದಾದ ಬಳಿಕ ಬಿಸಾಡಿದರೆ ಸಾಕು. ಆದ್ದರಿಂದ ನೀರು ಮತ್ತು ಶ್ರಮ ಉಳಿಸುತ್ತದೆ.
ಕನಸಿನಲ್ಲಿ ಬಾಳೆ ಬಂದರೆ ಹಣ, ಉಳಿತಾಯ, ಭ್ರೂಣ, ಸ್ಮಶಾನದಲ್ಲಿರುವ ಮನುಷ್ಯ, ಬಂಧಿಖಾನೆಯಲ್ಲಿರುವ ಬಂಧಿ, ಮುಚ್ಚಿದ ಪುಸ್ತಕ,ಗತ ಕಾಲದ ಸುದ್ದಿ, ಅಥವಾ ಇದು ಆಂತರಿಕ ಜ್ಞಾನವನ್ನು ಸಹ ಪ್ರತಿನಿಧಿಸುತ್ತದೆ. ಇದರ ಜೊತೆಗೆ ಬಾಳೆ ಎಂದರೆ ಬಟ್ಟೆ, ಪ್ರೇಮ, ಮಮತೆ, ಉದಾರವಾದ ವ್ಯಕ್ತಿ, ಏಕ ದೇವೋಪಾಸಕ ಅಥವಾ ಒಳ್ಳೆಯ ಮನುಷ್ಯನನ್ನು ಸಹ ಇದು ಸೂಚಿಸುತ್ತದೆ. ಹೀಗೆ ಬಾಳೆ ಕನಸಿನಲ್ಲಿ ಬಂದಾಗ ಅದರ ವಿಶ್ಲೇಷಣೆಯನ್ನು ಮಾಡಲಾಗುತ್ತದೆ. ಅದರಲ್ಲು ಒಂದು ಬಾಳೆ ಮರವು ಕನಸು ಕಾಣುವಾತನ ಮನೆಯ ಒಳಗೆ ಬೆಳೆದಿರುವಂತಹ ಕನಸು ಬಂದರೆ, ಆತನಿಗೆ ತಪ್ಪದೆ ಪುತ್ರ ಸಂತಾನವಾಗುತ್ತದೆ ಎಂದು ಹೇಳಲಾಗುತ್ತದೆ.
ವ್ಯವಹಾರ ಮಾಡುವವರ ಕನಸಿನಲ್ಲಿ ಬಾಳೆ ಹಣ್ಣು ಬಂದರೆ ಅದು ಅವರಿಗೆ ಬರುವ ಲಾಭ ಮತ್ತು ಅವರು ಸಾಧಿಸಬೇಕೆಂದಿರುವ ಮಹತ್ವಾಕಾಂಕ್ಷೆ ಕೈಗೂಡುತ್ತದೆ ಎಂದರ್ಥ. ಅವರ ಬಹು ದಿನದ ಶ್ರಮ ಕೈಗೂಡುವ ಕಾಲ ಬಂದಿದೆ ಎಂದು ವಿಶ್ಲೇಷಣೆ ಮಾಡಬಹುದು. ಇನ್ನು ರೋಗಿಯೊಬ್ಬ ಆತನ ಕನಸಿನಲ್ಲಿ ಬಾಳೆ ಹಣ್ಣನ್ನು ಸೇವಿಸಿದರೆ, ಅದು ರೋಗದ ಉಲ್ಪಣ ಮತ್ತು ಸಾವಿನ ಸಂಕೇತವಾಗಿ ಪರಿಗಣಿಸಲಾಗುತ್ತದೆ.
Discussion about this post